fbpx
ಸಮಾಚಾರ

‘ಮಿಷನ್​​ ಮಂಗಲ್’ ನಿರ್ದೇಶಕ ಕನ್ನಡದ ಪ್ರತಿಭೆ ಜಗನ್‌ಗೆ ಗಂಭೀರ ಕಾಯಿಲೆ: ಸಾವು-ಬದುಕಿನ ಹೋರಾಟದಲ್ಲಿ ಕನ್ನಡಿಗ!

ಜಗತ್ತೇ ಮೆಚ್ಚಿಕೊಂಡ ಸಿನಿಮಾ ‘ಮಿಷನ್ ಮಂಗಲ್’. ಈ ಚಿತ್ರದ ನಿರ್ದೆಶಕ ಜಗನ್ ಶಕ್ತಿ ನಮ್ಮ ಕನ್ನಡದವರು. ಆದರೆ ಅದೇ ನಿರ್ದೇಶಕ ಇಂದು ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಸೀರಿಯಸ್ ಕಂಡಿಶನ್ ನಲ್ಲಿದ್ದ ಅವರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶನಿವಾರ ಮುಂಬೈನ ಆಸ್ಪತ್ರೆಗೆ ಜಗನ್ ರನ್ನು ದಾಖಲು ಮಾಡಿದ್ದು, ಸದ್ಯದವರೆಗೆ ಚಿಕಿತ್ಸೆ ನೀಡಲಾಗುತ್ತಿದೆಂತೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಚಿಕಿತ್ಸೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಂತರ ವೈದ್ಯರು ತಿಳಿಸುತ್ತಾರಂತೆ.

ಮೂಲಗಳ ಪ್ರಕಾರ, ಜಗನ್‌ ಶಕ್ತಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ! ಹಲವು ದಿನಗಳಿಂದ ಅವರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಅದು ಅವರ ಗಮನಕ್ಕೆ ಬಂದಂತಿಲ್ಲ. ಇತ್ತೀಚೆಗೆ ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಜಗನ್‌ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕ ಆಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಜಗನ್ ಶಕ್ತಿ ಮೂಲತಃ ಕರ್ನಾಟಕದವರು. ನಿರ್ದೇಶಕ ಆರ್ ಬಾಲ್ಕಿ ಜೊತೆಗೆ ಕೆಲಸ ಮಾಡುತ್ತಿದ್ದ, ಅವರು ಬಾಲಿವುಡ್ ಚಿತ್ರರಂಗದ ಮೂಲಕ ಗುರುತಿಸಿಕೊಂಡರು. ‘ಮಿಷನ್ ಮಂಗಲ್’ ಅವರ ಮೊದಲ ಸಿನಿಮಾವಾಗಿದ್ದು, ಅಕ್ಷಯ್ ಕುಮಾರ್ ಚಿತ್ರದ ಮೂಲಕ ಸ್ವಾತಂತ್ರ್ಯ ನಿರ್ದೇಶಕರಾಗಿ ಲಾಂಚ್ ಆಗಿದ್ದರು. ಸದ್ಯ, ಅಕ್ಷಯ್ ಕುಮಾರ್​ ಜೊತೆ ಮತ್ತೊಂದು ಸಿನಿಮಾ ಮಾಡುವ ಯೋಚನೆಯಲ್ಲಿದ್ದರು. ತಮಿಳಿನ ಕತ್ತಿ ಸಿನಿಮಾವನ್ನ ರಿಮೇಕ್ ಮಾಡುವ ಸಿದ್ಧತೆಯಲ್ಲಿದ್ದರು. ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top