fbpx
ಸಮಾಚಾರ

ಸಾಮಾಜಿಕ ಕಳಕಳಿ: ಮದುವೆ ನೆನಪಿನಾರ್ಥ ಅನಾಥಾಶ್ರಮ ಮಕ್ಕಳಿಗೆ ಹೊಸ ಹಾಸಿಗೆ ನೀಡಿದ ನಟ ಚೇತನ್!

ನಟ ‘ಆ ದಿನಗಳು’ ಚೇತನ್‌ ಸಿನಿಮಾರಂಗದ ಜೊತೆಜೊತೆಗೆ ಆರಂಭದಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡವರು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಜನಪರ ನಿಲುವುಗಳನ್ನು ತಾಳಿದವರು. ಇದೀಗ ಅವರು ಸಂಭ್ರಮದಲ್ಲಿದ್ದಾರೆ. ನಟ ಚೇತನ್ ಫೆ.2ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸವಿ ನೆನಪಿಗಾಗಿ, ತಮ್ಮ ಭಾವಿ ಪತ್ನಿ ಮೇಘಾ ಅವರೊಂದಿಗೆ ಇಲ್ಲಿನ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆಗಳನ್ನು ಸಂಗ್ರಹಿಸಿ ನೀಡಿದ್ದಾರೆ.

 

 

ವಲ್ಲಭ್​ ನಿಕೇತನ ವಿನೋಭಾ ಭಾವೆ ಆಶ್ರಮದಲ್ಲಿ, ಫೆ.2ರ ಸಂಜೆ 6 ಗಂಟೆಗೆ ಅನಾಥಾಶ್ರಮದ ಮಕ್ಕಳು ಹಾಗೂ ವೃದ್ಧರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಆಶ್ರಮದ ಮಕ್ಕಳಿಗೆ ಮದುವೆಯ ನೆನಪಿನಾರ್ಥ ಹಾಸಿಗೆಯನ್ನು ನೀಡಲು ಚೇತನ್​ ಮತ್ತು ಭಾವಿ ಪತ್ನಿ ಹಾಸಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಕುರಿತು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿರುವ ಚೇತನ್​ ಮೇಘಾ, ವಿನಯ್ ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಅದೇನೇ ಇರಲಿ ಚಿತ್ರರಂಗದಲ್ಲಿ ಸ್ಟಾರ್‌ಗಿರಿಯನ್ನು ತಲೆಗೆ ತುಂಬಿಕೊಂಡು ಮೆರೆದಾಡುವವರೇ ಹೆಚ್ಚು. ಇಂಥವರಿಗೆಲ್ಲ ಜನ ಸಾವಿರ ಸಂಕಷ್ಟಗಳ ನಡುವೆಯೂ ಕಾಸು ಹೊಂದಿಸಿ ಚಿತ್ರಗಳನ್ನು ನೋಡೋದರಿಂದಲೇ ತಮಗೆ ಸ್ಟಾರ್‌ಗಿರಿ ಅಮರಿಕೊಂಡಿದೆ ಎಂಬ ಕನಿಷ್ಠ ಸೌಜನ್ಯವೂ ಮರೆತು ಹೋಗಿರುತ್ತದೆ. ಆದ್ದರಿಂದಲೇ ಜನರ ಸಮಸ್ಯೆಗಳಿಗೆ ಮಿಡಿಯುವ ಮನಸ್ಥಿತಿ ಬಹುತೇಕರಿಗೆ ಇಲ್ಲವಾಗಿದೆ. ಇಂಥಾ ವಾತಾವರಣದ ನಡುವೆ ನಟ ಚೇತನ್’ರಂತಹ ನಟರ ನಡೆ ನಿಜಕ್ಕೂ ಮೆಚ್ಚುವಂಥಾದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top