fbpx
ಸಮಾಚಾರ

“ಮದುವೆ ನಿಶ್ಚಯ ಆಗಿರೋದು ನಿಜ, ಆದ್ರೆ ಪ್ಲೀಸ್ ಈ ಕೆಲಸ ಮಾತ್ರ ಯಾರೂ ಮಾಡ್ಬೇಡಿ” ನಿಖಿಲ್ ಮನವಿ.

ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಎಂಬುವವರನ್ನು ಮದುವೆಯಾಗುತ್ತಿರುವ ಬಗ್ಗೆ ಕಳೆದ ಎರಡು ದಿನಗಳಿಂದ ಸಾಕಷ್ಟು ಚರ್ಚೆಯಾಗಿತ್ತು. ಹೆಣ್ಣು ನೋಡುವ ಶಾಸ್ತ್ರವನ್ನು ನಿಖಿಲ್ ಮುಗಿಸಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ದೇವೇಗೌಡರ ಕುಟುಂಬದವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಈಗ ಸ್ವತಃ ನಿಖಿಲ್ ಕುಮಾರಸ್ವಾಮಿ ಮದುವೆ ಬಗ್ಗೆ ಖಾಸಗಿ ವಾಹಿನಿ ಜೊತೆ ಮಾತನಾಡಿದ್ದಾರೆ.

ರೇವತಿ ಜೊತೆ ಮದುವೆ ಫಿಕ್ಸ್ ಆಗಿದ್ದು ನಿಜ, ನಮ್ಮ ಕುಟುಂಬಕ್ಕೆ ತಕ್ಕ ಹೆಣ್ಣು ಸಿಕ್ಕಿದ್ದಾರೆ. ಅಪ್ಪ ಅಮ್ಮನ ಆಸೆಯಂತೆ ಅವರು ನೋಡಿದ ಹೆಣ್ಣಿನ ಜೊತೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದೇನೆ. ಶೀಘ್ರದಲ್ಲೇ ಎಂಗೇಜ್‌ಮೆಂಟ್ ಡೇಟ್ ಫಿಕ್ಸ್ ಆಗಲಿದ್ದು, ನಾನಾಗೇ ಮಾಧ್ಯಮ ಮಿತ್ರರ ಮೂಲಕ ಜನರಿಗೆ ಮಾಹಿತಿ ನೀಡ್ತೇನೆ ಎಂದು ಹೇಳಿದ್ದಾರೆ.

ಪ್ಲೀಸ್ ಟ್ರೊಲ್ ಮಾಡ್ಬೇಡಿ:
ಇನ್ನು ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಜನರಲ್ಲಿ ವಿನಂತಿಸಿದ ನಿಖಿಲ್. ನಮಗೆ ಹೇಗೋ ಟ್ರೋಲ್ ಎಲ್ಲಾ ಮಾಡಿಸಿಕೊಂಡು ಅಭ್ಯಾಸ ಆಗಿ ಹೋಗಿದೆ. ಆದರೆ ಹೆಣ್ಣು ಮಕ್ಕಳು ತುಂಬ ಸೂಕ್ಷ್ಮವಾಗಿರ್ತಾರೆ. ಅವರನ್ನ ಟ್ರೋಲ್ ಮಾಡ್ಬೇಡಿ, ಆ ಹುಡುಗಿ(ರೇವತಿ) ನೆಮ್ಮದಿಯಾಗಿ ಬದುಕಲಿ. ನಿಮ್ಮಲ್ಲಿ ಕೈಜೋಡಿಸಿ ಕೇಳುತ್ತೇನೆ. ಆ ಹೆಣ್ಣು ಮಗಳನ್ನ ಮಾತ್ರ ಟ್ರೋಲ್ ಮಾಡ್ಬೇಡಿ ಎಂದು ವಿನಂತಿಸಿದ್ದಾರೆ.

“ದೇವರಾಣೆ ರೇವತಿ ಬಗ್ಗೆ ಏನೂ ಗೊತ್ತಿಲ್ಲ, ಇನ್ನೂ ಅವರ ಜೊತೆ ಮಾತನಾಡಿಲ್ಲ. ಆದರೆ ರೇವತಿ ಅವರು ನನಗೆ ಸರಿಯಾದ ಲೈಫ್ ಪಾರ್ಟನ್ ಎಂಬ ನಂಬಿಕೆಯೊಂದಿಗೆ ಅವರೊಂದಿಗೆ ನನ್ನ ಲೈಫ್ ಕಳೆಯುತ್ತೇನೆ. ಚಿತ್ರರಂಗ ಮತ್ತು ರಾಜಕಾರಣ ಎರಡೂ ದೊಡ್ಡ ಜವಾಬ್ದಾರಿ. ಚಿತ್ರರಂಗದಲ್ಲಿ ಇರೋದು ಫ್ಯಾಷನ್‌ಗೋಸ್ಕರ. ಎಲ್ಲಿಯವರೆಗೆ ಚಿತ್ರರಂಗದಲ್ಲಿ ಇರುತ್ತೀನೋ ಅಷ್ಟು ದಿನ ಒಳ್ಳೆಯ ಸಿನಿಮಾ ಮಾಡುತ್ತೇನೆ. ರಾಜಕಾರಣ ತುಂಬ ದೊಡ್ಡ ಜವಾಬ್ದಾರಿ.” ಎಂದು ನಿಖಿಲ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top