fbpx
ಸಮಾಚಾರ

“ನಗಿಸಿದ ದೇವರಿಗೆ ಸ್ಮಾರಕ ನಿರ್ಮಾಣ ಖಚಿತ” ಹಾಸ್ಯ ಚಕ್ರವರ್ತಿಯ ಸ್ಮಾರಕದ ಬಗ್ಗೆ ಮಾತು ಕೊಟ್ಟ ಜಗ್ಗೇಶ್

ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿವಂಗತ ನರಸಿಂಹರಾಜು ಅವರ ಸ್ಮಾರಕ ನಿರ್ಮಾಣ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವುದಾಗಿ ನಟ ಜಗ್ಗೇಶ್ ಟ್ವಿಟರ್‍ ನಲ್ಲಿ ತಿಳಿಸಿದ್ದಾರೆ. ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ಜಗ್ಗೇಶ್‌ ನರಸಿಂಹ ರಾಜು ಅವರ ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದರು. ಈಗ ನರಸಿಂಹರಾಜು ಸ್ಮಾರಕ ನಿರ್ಮಾಣದ ಬಗ್ಗೆ ಮತ್ತೆ ಮಾತನಾಡಿದ್ದಾರೆ.

 

 

”ಜಗ್ಗೇಶ್, ಕರ್ನಾಟಕದ ಜನರ ಹೃದಯ ಗೆದ್ದ ಹಾಸ್ಯ ನಟ ದಿ.ನರಸಿಂಹರಾಜು ಅವರ ಹೆಸರಲ್ಲಿ ಅವರ ನೆನಪು ಉಳಿಸಲು ತಿಪಟೂರಿನಲ್ಲಿ ಸ್ಮಾರಕ ಮಾಡಲಾಗುವುದು ಎಂದು ಒಂದು ಕಾರ್ಯಕ್ರಮದಲ್ಲಿ ಅವರ ಶ್ರೀಮತಿಯವರಿಗೆ ಆಶ್ವಾಸನೆ ನೀಡಿದ್ದ ನೆನಪು. ಅದೇನಾದರೂ ಕಾರ್ಯಗತ ಆಗ್ತಿದೆಯಾ, ಮಾನ್ಯ ಯಡಿಯೂರಪ್ಪರವರು ಮನಸ್ಸು ಮಾಡಿದ್ದಾರಾ?” ಎಂದು ಜಗ್ಗೇಶ್ ಗೆ ಟ್ವಿಟ್ಟರ್ ನಲ್ಲಿ ಪ್ರಶ್ನೆ ಬಂದಿತ್ತು!

ಇದಕ್ಕೆ ಉತ್ತರಿಸಿರುವ ಜಗ್ಗೇಶ್, “ಖಂಡಿತ… ನಾನು ಹಾಗೂ ನನ್ನ ಗೆಳೆಯ, ಶಾಸಕ ನಾಗೇಶ್ ರವರು ಆ ಕಾರ್ಯದ ಬಗ್ಗೆ ವಿಶೇಷ ಆಸಕ್ತಿವಹಿಸಿರುವೆವು… ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನರಸಿಂಹರಾಜುರವರ ಮಡದಿಗೆ ಕಳೆದವಾರ ನೀಡಿರುವೆ. ನಗಿಸಿದ ದೇವರಿಗೆ ಖಡಿತ ನೆನಪಿನ ಸ್ಮಾರಕ ನಿರ್ಮಾಣ ಆಗುತ್ತದೆ… ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top