fbpx
ಸಮಾಚಾರ

ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ‌ ಚೇತನ್!

2007 ರಲ್ಲಿ ‘ಆ ದಿನಗಳು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ಮೂಡಿಸಿದ ನಟ ಚೇತನ್ ಕುಮಾರ್. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಯನ್ನು ಚೇತನ್ ಇಂದು ಮದುವೆಯಾಗಿದ್ದಾರೆ.

 

 

ಚೇತನ್ ಅವರು ತುಂಬಾ ಸರಳವಾಗಿ ಮದುವೆಯಾಗಿದ್ದು ವಿಶೇಷ ವಿವಾಹ ಕಾಯ್ದೆಯಡಿ ಇಂದು ಗಾಂಧಿನಗರದ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ಡ್‌ ಮದುವೆ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಾಳೆ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸಂತೋಷ ಕೂಟ ಆಚರಿಸುತ್ತಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗುವಂತಹ ಮಾದರಿ ನಡೆ ಇಟ್ಟಿದ್ದಾರೆ.

ಇನ್ನೂ ಆಡಂಬರವಿಲ್ಲದೆ ಸರಳವಾಗಿ ನಡೆಯಲಿರುವ ಈ ಮದುವೆಯಲ್ಲಿ ನಾಳೆ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚೇತನ್‌ ಮತ್ತು ಮೇಘ ದಿರಿಸುಗಳು ಕೂಡ ಪ್ರಕೃತಿ ಪರವಾಗಿ, ರೈತನ ಪರವಾಗಿ ಇರಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top