fbpx
ಸಮಾಚಾರ

ನಟ ಯಶ್ ಕುಟುಂಬದ ಕುರಿತು ಹೀಗೊಂದು ಸುದ್ದಿ!

ಖ್ಯಾತ ನಟ ಯಶ್​ ಕೆಜಿಎಫ್​ ಸಿನಿಮಾ ಶೂಟಿಂಗ್​ ಬಿಟ್ಟು ವೈರಿಗಳ ನಾಶಕ್ಕೆ ಮಾರ್ಕಂಡೇಯ ಹೋಮ ನಡೆಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ದುರ್ಗಾ ರಾಧಾ ಕೃಷ್ಣ ದೇವಾಲಯದಲ್ಲಿ ಯಶ್​, ಪತ್ನಿ ರಾಧಿಕಾ ಹಾಗೂ ತಂದೆ ತಾಯಿ ಹೋಮ ಮಾಡಿಸಿದ್ದಾರೆ ಎಂದು ವರದಿಯಾಗಿದೆ.

ಯಶ್ ಕುಟುಂಬ ಮಲ್ಲೇಶ್ವರಂನಲ್ಲಿರುವ ದುರ್ಗಾ ರಾಧಾ-ಕೃಷ್ಣ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ನೆನ್ನೆ ಬೆಳಗ್ಗೆ ಸುಮಾರು 10.30ರಿಂದ ಪೂಜೆ ಮಾಡಿಸುತ್ತಿದ್ದಾರೆ. ಸದ್ಯಕ್ಕೆ ಯಶ್ ದಂಪತಿ ಮಾರ್ಕಂಡೇಯ ಹೋಮ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಅಪಕಂಟಕ ಮತ್ತು ಶತ್ರು ನಾಶಕ್ಕೆ ಮಾರ್ಕಂಡೇಯ ಹೋಮ ಮಾಡಿಸಲಾಗುತ್ತದೆ. ಹೋಮದಲ್ಲಿ ಯಶ್, ರಾಧಿಕಾ, ಯಶ್ ತಂದೆ ಮತ್ತು ತಾಯಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ದೇವಸ್ಥಾನದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೇ ಕೂಸಿಗೆ ನಾಮಕರಣ ಮಾಡಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಯಶ್​ ಹೋಮ ಮಾಡಿಸುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ರದ್ದುಪಡಿಸಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top