fbpx
ಸಮಾಚಾರ

ವಿಶಿಷ್ಟವಾಗಿ ನಡೆದ ಚೇತನ್-ಮೇಘ ಆರತಕ್ಷತೆ: ಬಹುತ್ವ ಸಾರುವ ಕಾರ್ಯಕ್ರಮಕ್ಕೆ ನಟರು, ರಾಜಕಾರಣಿಗಳು ಭಾಗಿ! ಹೊಸ ಸಂಪ್ರದಾಯಕ್ಕೆ ನಾಂದಿ

2007 ರಲ್ಲಿ ‘ಆ ದಿನಗಳು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ಮೂಡಿಸಿದ ನಟ ಚೇತನ್ ಕುಮಾರ್. ಮೊನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಯನ್ನು ಚೇತನ್ ಇಂದು ಮದುವೆಯಾಗಿದ್ದಾರೆ.

ಚೇತನ್ ಅವರು ತುಂಬಾ ಸರಳವಾಗಿ ಮದುವೆಯಾಗಿದ್ದು ವಿಶೇಷ ವಿವಾಹ ಕಾಯ್ದೆಯಡಿ ಶನಿವಾರ ಗಾಂಧಿನಗರದ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ಡ್‌ ಮದುವೆ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ನೆನ್ನೆ ಭಾನುವಾರ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸಂತೋಷ ಕೂಟವನ್ನು ವಿಶಿಷ್ಟವಾಗಿ ಆಚರಿಸಿದ್ದು ಈ ಮೂಲಕ ಎಲ್ಲರಿಗೂ ಮಾದರಿಯಾಗುವಂತಹ ಮಾದರಿ ನಡೆ ಇಟ್ಟಿದ್ದಾರೆ.

ವಿಶಿಷ್ಟವಾಗಿ ನಡೆದ ಚೇತನ್ ಮತ್ತು ಮೇಘ ಆರತಕ್ಷತೆಯಲ್ಲಿ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ಸಿ.ಎಂ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತೋಷ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ರಿಸೆಪ್ಷನ್‌ನಲ್ಲಿ ಲಂಬಾಣಿ ಹಾಗೂ ಬುಡಕಟ್ಟು ಜಾನಪದ ನೃತ್ಯಗಳ ಪ್ರದರ್ಶನ, ಬಸವಣ್ಣ, ಅಲ್ಲಮರ ವಚನ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಚನ, ಸೂಫಿ ಗಾಯನ, ಸಿದ್ದಿ ನೃತ್ಯ, ಲಂಬಾಣಿ ನೃತ್ಯ ಮತ್ತು ಕೋರಗ ನೃತ್ಯ ಹೀಗೆ ಬಹುತ್ವ ಸಂದೇಶ ಸಾರುವ ಕಾರ್ಯಕ್ರಮಗಳು ಇದ್ದವು. ನಂತರ ಅತಿಥಿಗಳಿಂದ ಮನದ ಮಾತು, ನವ ದಂಪತಿಗಳಿಂದ ವೇದಿಕೆ ಮೇಲೆ ಪ್ರತಿಜ್ಞೆ ನಡೆಯಿತು. ಇದರ ಜೊತೆಗೆ ಪುಸ್ತಕ ಮಳಿಗೆ ಆಯೋಜನೆ ಮಾಡಲಾಗಿತ್ತು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top