fbpx
ಸಮಾಚಾರ

“ನರೇಂದ್ರ ಮೋದಿ ರೀತಿ ದೊಡ್ಡ ನಾಯಕನಾಗಬೇಕಾದ್ರೆ ಹಿಂದಿ ಕಲಿಬೇಕು” ಸಂಸದ ಪ್ರಹ್ಲಾದ್ ಜೋಶಿ

ಈ ಹಿಂದೆ ಕನ್ನಡ ಧ್ವಜದದ ಬಗ್ಗೆ ಉಡಾಫೆಯ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಹಿಂದಿ ಪ್ರೇಮಿ ಪ್ರಹ್ಲಾದ್ ಜೋಷಿ ಇದೀಗ ಮತ್ತೊಮ್ಮೆ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ‘ಪ್ರಧಾನಿ ಮೋದಿಯಂತೆ ದೊಡ್ಡ ನಾಯಕನಾಗಬೇಕಾದ್ರೆ ಹಿಂದಿ ಕಲಿಬೇಕು’ ಎಂದು ಹೇಳುವ ಮೂಲಕ ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ದಾರೆ!

ಭಾನುವಾರ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಭಾಗವಹಿಸಿದ್ದರು.

ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಲ್ಹಾದ್ ಜೋಶಿ “ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೆ ದೊಡ್ಡ ನಾಯಕರಾಗಿ ಬೆಳೆಯಬೇಕೆಂದರೆ ಪ್ರತಿಯೊಬ್ಬರೂ ಹಿಂದಿ ಕಲಿಯಬೇಕು. ಏನೇ ಮಾಡಿದರೂ ಆತ್ಮವಿಶ್ವಾಸದಿಂದ ಮಾಡಬೇಕು” ಎಂದು ಹೇಳಿದ್ದಾರೆ.

ಜೋಷಿ ಅವರ ಈ ಹೇಳಿಕೆಗೆ ನೆಟ್ಟಿಗರು ಕಿಡಿಕಾರಿದ್ದು ಪ್ರಹ್ಲಾದ್ ಜೋಶಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದಿ ಕಲಿತವರೆಲ್ಲರೂ ದೊಡ್ಡ ನಾಯಕನಾಗಬಹುದೇ? ಬೇರೆ ಭಾಷೆಗಳಲ್ಲಿ ಮಾತನಾಡುವವರು ದೊಡ್ಡ ನಾಯಕರಾಗಿ ಬೆಳೆಯಲು ಸಾಧ್ಯವಿಲ್ಲವೇ? ಬೇರೆ ಭಾಷೆಗಳಿಗೆ ಇಲ್ಲದೆ ಆದ್ಯತೆಯನ್ನು ಹಿಂದಿಗೆ ಯಾಕೆ ನೀಡುತ್ತೀರಾ? ಎಂದು ಕನ್ನಡಿಗರು ಜೋಶಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top