fbpx
ಸಮಾಚಾರ

“ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು” ದ್ವಾರಕೀಶ್-ನಿರ್ಮಾಪಕರ ಜಗಳಕ್ಕೆ ಜಗ್ಗೇಶ್ ಎಂಟ್ರಿ!

ಸ್ಯಾಂಡಲ್‍ವುಡ್ ಹಿರಿಯ ನಟ ದ್ವಾರಕೀಶ್ ಹಾಗೂ ನಿರ್ಮಾಪಕ, ಫೈನಾನ್ಶಿಯರ್ ರಮೇಶ್ ಜಗಳಕ್ಕೆ ನವರಸ ನಾಯಕ ಜಗ್ಗೇಶ್ ಎಂಟ್ರಿ ಕೊಟ್ಟಿದ್ದು, ಸರಣಿ ಟ್ವೀಟ್ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಚಿತ್ರರಂಗದ ಹಣಕಾಸಿನ ವ್ಯವಹಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಜಯಣ್ಣ ಹಾಗೂ ದ್ವಾರಕೀಶ್ ಹಣಕಾಸಿನ ವ್ಯವಹಾರದ ಗಲಾಟೆ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ತಮಗೆ ಆದ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದು ಹಣಕಾಸಿನ ವ್ಯವಹಾರದಲ್ಲಿ ಜಗ್ಗೇಶ್ ರಿಗೂ ಒಂದು ಕೋಟಿ ಹಣ ಬರಬೇಕಿದೆ. ಒಳ್ಳೆಯ ಮಾತು ಆಡಿ ಹಣ ತೆಗೆದುಕೊಂಡು ಹೋದವರು ವಾಪಸ್ ಹಣ ನೀಡುತ್ತಿಲ್ಲ ಎಂದು ಜಗ್ಗೇಶ್ ತಮ್ಮ ಮಾತಿನ ಮೂಲಕ ತಿಳಿಸಿದ್ದಾರೆ.

 

 

“ಕೊಟ್ಟವ ಸ್ನೇಹಿತ!ಬಳಸಿಕೊಂಡವರು ಸ್ನೇಹಿತರು! ಇದು ಹಣದ ವಿಷಯ ಮಾತಾಡುವುದು ಕಷ್ಟ! ನನಗೆ ಬರಬೇಕಾದ್ದ 1ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನವಿಷಯವು ಹೀಗೆ ಬರುವುದು! ಹಣ ಬೇಕಾದಾಗ ಪ್ರಾಮಾಣಿಕ ವ್ಯೆವಹಾರಸ್ಥರು! ವಾಪಸ್ ಕೊಡುವಾಗ ಮಾಧ್ಯಮ ಪೋಲಿಸ್ ಮಾನಹಾನಿ ಎಂಥದೌರ್ಭಾಗ್ಯ ವ್ಯೆವಹಾರ! ಬರುವ ಹಣಕ್ಕಾಗಿ ನಾನು ತಾಲ್ಮೆಯಿಂದ ಕಾಯುತ್ತಿರುವ ಮೂರ್ಕ!” ಎಂದು ಜಗ್ಗೇಶ್ ಮೊದಲ ಟ್ವೀಟ್ ಮಾಡಿದ್ದಾರೆ.

 

 

‘ರಮೇಶ್ ಹಾಗು ಜಯಣ್ಣ ಗೌರವಸ್ಥ ವ್ಯವಹಾರಿಗಳು! ಕೊಟ್ಟವ ಕೋಡಂಗಿ.. ಇಸ್ಕೊಂಡವ ಈರಭಧ್ರ. ಇದು ಗಾಂಧಿನಗರ. Even I am fedup with gandhinagar business. ಗಾಂಧಿನಗರ ಬಿಲ್ಡ್ ಅಪ್ ರಾತ್ರಿ ನೆನೆದರು ನಿದ್ರೆ ಬಾರದು ನನಗೆ. ಎಲ್ಲರೂ ಸ್ಟಾರ್ಸ್ ಇನ್ ಮೀಡಿಯಾ, ಪ್ರೊಡ್ಯೂಸರ್ ಮಾತ್ರ ಫುಟ್ ಪಾತ್. ನಿಜ ಗಾಂಧಿನಗರ ದುನಿಯಾ. ನೇರನುಡಿ ನಿಷ್ಟೂರವಾದಿ ವ್ಯಾಖ್ಯಾನ” ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top