fbpx
ಸಮಾಚಾರ

ನಿಖಿಲ್ ಕುಮಾರ್ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್! ಎಲ್ಲಿ, ಯಾವಾಗ ಗೊತ್ತಾ?

ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಎಂಬುವವರನ್ನು ಮದುವೆಯಾಗುತ್ತಿರುವ ಬಗ್ಗೆ ಕಳೆದ ಎರಡು ದಿನಗಳಿಂದ ಸಾಕಷ್ಟು ಚರ್ಚೆಯಾಗಿತ್ತು. ಹೆಣ್ಣು ನೋಡುವ ಶಾಸ್ತ್ರವನ್ನು ನಿಖಿಲ್ ಮುಗಿಸಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಸಿಕ್ಕಿದೆ. ಅದು ನಿಖಿಲ್​-ರೇವತಿಯ ನಿಶ್ಚಿತಾರ್ಥ.

ಹೌದು, ಫೆಬ್ರವರಿ 10 ರಂದು ನಿಖಿಲ್ ಹಾಗೂ ರೇವತಿ ನಿಶ್ಚಿತಾರ್ಥ ನಡೆಯಲಿದೆ. ಜನವರಿ 30ರಂದೇ ಎಂಗೇಜ್ ಮೆಂಟ್ ದಿನಾಂಕವನ್ನು ಕುಟುಂಬ ನಿರ್ಧಾರ ಮಾಡಿದೆ. ಫೆಬ್ರವರಿ 10ರಂದು ತಾಜ್‌ ವೆಸ್ಟ್ ಎಂಡ್ ನಲ್ಲಿ ಅದ್ಧೂರಿ ನಿಶ್ಚಿತಾರ್ಥ ನಡೆಯಲಿದ್ದು ಈ ಜೋಡಿಯ ಎಂಗೇಜ್‍ಮೆಂಟ್‍ನಲ್ಲಿ ನಿಖಿಲ್ ಮತ್ತು ರೇವತಿ ಕುಟುಂಬದವರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

ನನಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್ ಎಂದು ನಿಖಿಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ಮದುವೆ ಬಗ್ಗೆ ಮಾತನಾಡಿದ ನಿಖಿಲ್, ನಮ್ಮ ಮನೆಯವರಿಗೆ ನೀವು ನೋಡಿದ ಹುಡುಗಿಯನ್ನೇ ಮದುವೆಯಾಗುತ್ತೀನಿ ಎಂದು ಹೇಳಿದ್ದೆ. ಈಗ ರೇವತಿ ಅವರನ್ನು ಮನೆಯವರು ನೋಡಿ ಆಯ್ಕೆ ಮಾಡಿದ್ದರು. ನನ್ನ ಅಭಿಪ್ರಾಯವನ್ನು ಕೇಳಿದರು. ನಾನು ಒಪ್ಪಿದ ಮೇಲೆ ಮದುವೆ ಫಿಕ್ಸ್ ಮಾಡಿದ್ದಾರೆ. ಹೀಗಾಗಿ ಕುಟುಂಬದವರ ಮಾತು ಉಳಿಸಿಕೊಂಡಿರುವುದಕ್ಕೆ ಖುಷಿಯಾಗಿದೆ ಎಂದರು

ಅಲ್ಲದೆ ನಿಶ್ಚಿತಾರ್ಥ ಸಮಾರಂಭದಲ್ಲಿ ಸುಮಾರು 5 ಸಾವಿರ ಜನರು ನಿಶ್ಚಿತಾರ್ಥದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇನ್ನು ನಿಶ್ಚಿತಾರ್ಥದ ಎರಡು ತಿಂಗಳ ನಂತರ ಮದುವೆ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ ನಲ್ಲಿ ನಿಖಿಲ್ ಕಲ್ಯಾಣೋತ್ಸವ ಜರುಗಲಿದೆ ಎನ್ನುವ ಸುದ್ದಿ ಇದೆ. ಆದರೆ, ಈ ಬಗ್ಗೆ ಕುಟುಂಬ ಮೂಲಗಳು ತಿಳಿಸಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top