fbpx
ಸಮಾಚಾರ

ಟೀಂ ಇಂಡಿಯಾಗೆ ಶಾಕಿಂಗ್ ಸುದ್ದಿ: ಕಿವೀಸ್ ಸರಣಿಯಿಂದಲೇ ರೋಹಿತ್ ಶರ್ಮಾ ಹೊರಗೆ-ಕಾರಣ ಏನು ಗೊತ್ತಾ?

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆಲುವಿನ ವಿಜಯೋತ್ಸವದಲ್ಲಿರುವ ಟೀಮ್ ಇಂಡಿಯಾಗೆ ಬಹು ದೊಡ್ಡ ಆಘಾತ ಎದುರಾಗಿದೆ. ಗಾಯದ ಸಮಸ್ಯೆಗೆ ಒಳಗಾಗಿರುವ ಬಲಗೈ ಓಪನರ್ ರೋಹಿತ್ ಶರ್ಮಾ, ಸಂಪೂರ್ಣ ನ್ಯೂಜಿಲೆಂಡ್ ಸರಣಿಗೆ ಅಲಭ್ಯವಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಬಿಸಿಸಿಐ ಮೂಲಗಳು ಪಿಟಿಐಗೆ ವರದಿ ಮಾಡಿದೆ.

ರೋಹಿತ್ ಶರ್ಮಾ ಇನ್ನುಳಿದ ನ್ಯೂಜಿಲೆಂಡ್ ಪ್ರವಾಸ ಪಂದ್ಯಗಳಿಂದ ಸದ್ಯ ಹೊರಗುಳಿಸಿದ್ದಾರೆ. ರೋಹಿತ್ ಹೊರ ಬಿದ್ದಿರುವುದು ಒಳ್ಳೆಯದಲ್ಲ. ಇದು ತಂಡಕ್ಕೆ ಎಷ್ಟರ ಮಟ್ಟಿಗೆ ಕೆಟ್ಟ ಪರಿಣಾಮ ಬೀರಲಿದೆ ಎಂಬುದು ನಮಗೆ ಗೊತ್ತಿದೆ. ಆದರೆ ರೋಹಿತ್ ಪ್ರವಾಸ ಸರಣಿಯಲ್ಲಿ ಆಡುತ್ತಿಲ್ಲ,’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಟೀಂ ಇಂಡಿಯಾ ಫೆ.5ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಫೆ 21 ರಿಂದ 2 ಪಂದ್ಯಗಳ ಟೆಸ್ಟ್ ಟೂರ್ನಿ ಆರಂಭವಾಗಲಿದೆ. ಗಾಯಾಳು ರೋಹಿತ್ ಬದಲಿಗೆ ಮಯಾಂಕ್‌ ಅಗರ್ವಾಲ್‌ ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಮಯಾಂಕ್‌ ಈ ಹಿಂದೆಯೂ ಭಾರತ ತಂಡದಲ್ಲಿ ಕಾಯ್ದಿರಿಸಲ್ಪಟ್ಟ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಸ್ಥಾನ ಪಡೆದಿದ್ದರು.

ಅಂದಹಾಗೆ ಭಾನುವಾರ ಮುಕ್ತಾಯವಾದ ಟಿ20 ಸರಣಿಯ ಕೊನೆಯ ಪಂದ್ಯದಿಂದ ನಾಯಕ ವಿರಾಟ್‌ ಕೊಹ್ಲಿ ಹೊರಗುಳಿದಿದ್ದರು. ಹೀಗಾಗಿ ತಂಡ ಮುನ್ನಡೆಸುವ ಜವಾಬ್ದಾರಿ ಹೊತ್ತ ರೋಹಿತ್‌, ಬ್ಯಾಟಿಂಗ್‌ ವೇಳೆ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಿವೃತ್ತಿ ಪಡೆದು ಮೈದಾನದಿಂದ ಹೊರನಡೆದಿದ್ದ ಅವರು, ಬಳಿಕ ಮೈದಾನಕ್ಕಿಳಿದಿರಲಿಲ್ಲ. ರೋಹಿತ್ ಬದಲು ಕನ್ನಡಿಗ ಕೆ.ಎಲ್‌.ರಾಹುಲ್‌ ತಂಡ ಮುನ್ನಡೆಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top