fbpx
ಸಮಾಚಾರ

ಟೀಂ ಇಂಡಿಯಾ ಆಟಗಾರನ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ?

ಚಿತ್ರರಂಗದ ಬಹುತೇಕ ನಟಿಯರು ಚಿತ್ರಕ್ಕಿಂತಲೂ ಮದುವೆ ವಿಚಾರಗಳ ಮೂಲಕವೇ ಸದ್ದು ಮಾಡೋದೇ ಹೆಚ್ಚು. ಸದ್ಯ ದಕ್ಷಿಣ ಭಾರತದ ಬಹುಬೇಡಿಕೆಯಲ್ಲಿರೋ ನಟಿ ಅನುಷ್ಕಾ ಶೆಟ್ಟಿಯನ್ನು ಆ ಪಟ್ಟಿಯಿಂದ ಹೊರಗಿಡಲು ಹೇಗೆ ಸಾಧ್ಯ? ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ಒಂದು ಸುರ್ಪ್ರೈಸ್ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಕನ್ನಡದ ಹುಡುಗಿ ಅನುಷ್ಕಾ ಬಾಲಿವುಡ್ ಮಟ್ಟದಲ್ಲಿಯೂ ಮಿಂಚುತ್ತಿರೋ ತಾರೆ. ಇಂತ ಅನುಷ್ಕಾ ಮತ್ತು ಟಾಲಿವುಡ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಇಬ್ಬರೂ ಲವ್ವಲ್ಲಿ ಬಿದ್ದಿದ್ದು, ಮದುವೆ ಕೂಡ ಮಾಡಿಕೊಳ್ಳಲಿದ್ದಾರೆ ಎನ್ನುವ ಅಫೇರ್ ಬಗ್ಗೆ ರಂಗು ರಂಗಾದ ಕಥೆಗಳು ಒಂದಷ್ಟು ವರ್ಷಗಳ ಹಿಂದೆಯಿಂದಲೇ ಬಾರಿ ಕೇಳಿ ಬಂದಿತ್ತು. ಆದರೆ ಆ ಬಗ್ಗೆ ಎಷ್ಟೇ ಬಾರಿ ಕೇಳಿದರೂ ಇಬ್ಬರಿಂದಲೂ ನಕಾರಾತ್ಮಕ ಉತ್ತರವೇ ಬರುತ್ತಿತ್ತು. ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ಸದ್ಯ ಈ ಇಬ್ಬರು ತಾರೆಯರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಕ್ರಿಕೆಟರ್ ಜೊತೆ ಅನುಷ್ಕಾ ಕಲ್ಯಾಣ:
ಇದೀಗ ಅನುಷ್ಕಾ ಶೆಟ್ಟಿ ಅವರು ಕ್ರಿಕೆಟ್ ಆಟಗಾರನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇದುವರೆಗೂ ಅನುಷ್ಕಾ ಶೆಟ್ಟಿ ಯಾವ ಕ್ರಿಕೆಟ್ ಆಟಗಾರನ ಜೊತೆಯೂ ಕಾಣಿಸಿಕೊಂಡಿಲ್ಲ. ಆದರೂ ಅನುಷ್ಕಾ ಶೆಟ್ಟಿ ಈಗ ಕ್ರಿಕೆಟ್ ಆಟಗಾರನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಅಚ್ಚರಿ ತಂದಿದೆ. ಉತ್ತರ ಭಾರತ ಮೂಲದ ಆಟಗಾರನ ಜೊತೆ ವಿವಾಹವಾಗಲು ಅನುಷ್ಕಾ ಶೆಟ್ಟಿ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಅನುಷ್ಕಾ ಶೆಟ್ಟಿ ಮದುವೆ ಕಿಕ್ರೆಟ್ ಆಟಗಾರನ ಜೊತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಆಟಗಾರ ಯಾರು ಎಂಬುದರ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಆದರೆ ಅಭಿಮಾನಿಗಳಂತೂ ಉತ್ತರ ಭಾರತದ ಆಟಗಾರ ಯಾರಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top