fbpx
ಸಮಾಚಾರ

ಕಿಚ್ಚನಿಂದ ವಿಶೇಷ ಉಡುಗೊರೆ ಪಡೆದ ಹರೀಶ್ ರಾಜ್: ಗಿಫ್ಟ್ ನೋಡಿ ಹರೀಶ್ ಕಣ್ಣೀರು!

ಮೊದಲನೇ ವಾರದಿಂದಲೂ ವೀಕ್ಷಕರನ್ನು ಮನರಂಜಿಸುತ್ತಿದ್ದ ಹರೀಶ್‌ ಫಿನಾಲೆ ವಾರ ಮುಟ್ಟುವಷ್ಟರಲ್ಲಿ ಮನೆಯಿಂದ ಹೊರ ಬಂದಿದ್ದರು. ಫಿನಾಲೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದಾಗ, ಹರೀಶ್ ರಾಜ್ ಔಟ್ ಆಗಿದ್ದರು. ಭರಪೂರ ಮನರಂಜನೆ ನೀಡಿದ್ದ ಹರೀಶ್ ರಾಜ್ ಗೆ ಏನಾದರೂ ಕೊಡಬೇಕು ಎಂದುಕೊಂಡಿದ್ದ ಸುದೀಪ್ ದುಬಾರಿ ಬೆಲೆಯ ಉಡುಗೊರೆಯನ್ನೇ ನೀಡಿದ್ದಾರೆ.

ಬಿಗ್‌ಬಾಸ್‌ ಸೀಸನ್‌-7 ಮುಗಿದ ನಂತರ ಸುದೀಪ್‌ ಒಟ್ಟಾಗಿ ಸ್ಪರ್ಧಿಗಳು ಮಾಡಿದ ಪಾರ್ಟಿಯಲ್ಲಿ ಕಿಚ್ಚ ಹರೀಶ್‌ ಅವರಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಹರೀಶ್‌ ರಾಜ್‌ ರಿವೀಲ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಹರೀಶ್ ರಾಜ್, ಸುದೀಪ್ ಸರ್ ಹೇಳಿದ್ದಂತೆ ಬಿಗ್‍ಬಾಸ್ ಮುಗಿಯುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ಪಾರ್ಟಿ ಮಾಡಿದ್ವಿ. ಈ ವೇಳೆ ಮಾತನಾಡಿದ ಸುದೀಪ್ ಸರ್, ಹರೀಶ್ ರಾಜ್ ಎಲ್ಲರನ್ನು ಮನರಂಜನೆ ನೀಡಿದ್ದಾರೆ. ಅವರಿಗೆ ನಾನು ಏನಾದರು ಕೊಡಬೇಕು ಎಂದು ಎಲ್ಲರ ಮುಂದೆ ಹೇಳಿದರು. ಅಲ್ಲದೇ ಮಾತು ಮುಗಿಯುವ ಮುನ್ನವೇ ತಮ್ಮ ಕೈಯಲ್ಲಿದ್ದ ದುಬಾರಿ ವಾಚನ್ನು ತೆಗೆದು ನನಗೆ ಹಾಕಿದರು ಎಂದರು.

 

 

“ಸುದೀಪ್ ಅವರಂತಹ ದಿಗ್ಗಜ ನಟರು ಹರೀಶ್‌ ನೀವು ಎಂಟೈರ್‌ಟೆನ್‌ ಮಾಡಿದ್ರಿ ಅಂತಾ ಹೇಳಿದಾಗ ಕಲಾವಿದನಿಗೆ ಅದಕ್ಕಿಂತ ಹೆಚ್ಚು ಏನೂ ಬೇಕು. ಪಾರ್ಟಿಯಲ್ಲಿ ಇದನ್ನೆಲ್ಲಾ ಹೇಳಿ, ನಾನು ಹರೀಶ್‌ ರಾಜ್‌ಗೆ ಏನಾದ್ರೂ ಮಾಡ್ಬೇಕು ಅಂತಾ ತಮ್ಮ ಕೈಯಲ್ಲಿದ್ದ ವಾಚ್‌ನ ಗಿಫ್ಟ್ ಕೊಟ್ಟರು. ಆಗ ನಾನು ತುಂಬಾ ಎಮೋಷನಲ್‌ ಆದೆ. ಅವರನ್ನ ತಬ್ಬಿಕೊಂಡು ನಾನು ಕಣ್ಣೀರಿಟ್ಟೆ” ಎಂದು ಹರೀಶ್ ರಾಜ್ ಹೇಳಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top