fbpx
ಸಮಾಚಾರ

“ನಮ್ಮಿಬ್ಬರ ಮೇಲೆ ನಿಮ್ಮ ಪ್ರೀತಿ-ಹಾರೈಕೆಗಳು ಇರಲಿ” ಭಾವಿ ಪತ್ನಿ ಜೊತೆ ಮೊದಲ ಫೋಟೋ ಶೇರ್ ಮಾಡಿದ ನಿಖಿಲ್!

ಮದುವೆ ಸಂಭ್ರಮದಲ್ಲಿರುವ ಸ್ಯಾಂಡಲ್‌ವುಡ್‌ ನಟ ನಿಖಿಲ್ ಕುಮಾರಸ್ವಾಮಿ ತಮ್ಮ ಬಾಳ ಸಂಗಾತಿ ರೇವತಿ ಜೊತೆಗಿನ ಮೊದಲ ಫೋಟೋ ಹಂಚಿಕೊಂಡಿದ್ದಾರೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ವಿವಾಹದ ತಯಾರಿ, ಸ್ಥಳ ನಿಗದಿಯಂತಹ ಪ್ರಮುಖ ಕೆಲಸಗಳು ಭರದಿಂದ ಸಾಗಿದ್ದು, ಫೋಟೋ ಶೇರ್ ಮಾಡಿಕೊಂಡ ನಟ ತಮ್ಮನ್ನು ಆಶಿರ್ವದಿಸುವಂತೆ ಕೇಳಿಕೊಂಡಿದ್ದಾರೆ.

 

 

‘ನನ್ನ ಸಂಗಾತಿಯಾಗುವವರ ಜೊತೆಗಿನ ಮೊದಲ ಫೋಟೊವನ್ನು ಶೇರ್ ಮಾಡ್ಕೊಳೋಕೆ ಖುಷಿ ಆಗ್ತಿದೆ. ಎಂದಿನಂತೆ ನನ್ನ ಮೇಲಿನ ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲೂ ಇರಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದು ನಿಖಿಲ್ ಬರೆದುಕೊಂಡಿದ್ದಾರೆ.

ಇನ್ನು ಇದೇ ತಿಂಗಳು ಫೆಬ್ರವರಿ 10 ರಂದು ನಿಖಿಲ್ ಮತ್ತೆ ರೇವತಿ ನಿಶ್ಚಿತಾರ್ಥ ನಡೆಯಲಿದೆ. ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಅದ್ಧೂರಿಯಾಗಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ. ಈ ಜೋಡಿಯ ಎಂಗೇಜ್‍ಮೆಂಟ್‍ನಲ್ಲಿ ನಿಖಿಲ್ ಮತ್ತು ರೇವತಿ ಕುಟುಂಬದವರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಸುಮಾರು 5 ಸಾವಿರ ಜನರು ನಿಶ್ಚಿತಾರ್ಥದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top