fbpx
ಸಮಾಚಾರ

“ಪ್ರತ್ಯೇಕ ಗುಂಪಿನಿಂದ ಹಿರಿಯ ಕಲಾವಿದರಿಗೆ ಅವಕಾಶ ಸಿಗ್ತಿಲ್ಲ” ಟೆನ್ನಿಸ್ ಕೃಷ್ಣ ಹೇಳಿದ ಆ ಪ್ರತ್ಯೇಕ ಗುಂಪು ಯಾವುದು?

ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿದೆ. ಸ್ಯಾಂಡಲ್​​ವುಡ್​ನಲ್ಲಿ ಪ್ರತ್ಯೇಕ ಗುಂಪೊಂದು ಇದನ್ನು ನಿಯಂತ್ರಿಸುತ್ತಿತ್ತು. ಈಗ ಆ ಗುಂಪು ಒಡೆದಿದೆ. ಹಾಗಾಗಿ ನಮಗೆ ಮತ್ತೆ ಅವಕಾಶಗಳು ಸಿಗುತ್ತಿವೆ ಎಂದು ಸ್ಯಾಂಡಲ್​ವುಡ್​ನ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಹೇಳಿದ್ದಾರೆ.

ಇಂದು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ಯಾಂಡಲ್​ವುಡ್​​ನಲ್ಲಿ ಪ್ರತ್ಯೇಕ ಗುಂಪೊಂದು ಇದನ್ನು ನಿಯಂತ್ರಿಸುತ್ತಿತ್ತು. ನಾನು ಧೈರ್ಯವಾಗಿ ಮಾಧ್ಯಮದ ಮುಂದೆ ಈ ಹಿಂದೆಯೇ ಇದನ್ನೆಲ್ಲಾ ಹೇಳಿದ್ದೇನೆ. ಈಗ ಆ ಗುಂಪು ಹೊಡೆದಿದೆ” ಎಂದರು.

ಸದ್ಯ ನಮಗೆ ಅವಕಾಶಗಳು ಸಿಗುತ್ತಿದೆ, ಅಭಿಮಾನಿಗಳು ನಮ್ಮ ನಟನೆಗಾಗಿ ಕಾಯುತ್ತಿದ್ದಾರೆ ಆದರೆ ಕೆಲವರು ನಮಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಸ್ಯಾಂಡಲ್​​ವುಡ್​ ಪ್ರತ್ಯೇಕ ತಂಡದ ಬಗ್ಗೆ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಟೆನಿಸ್ ಕೃಷ್ಣ ಅವರು ಹೇಳಿರುವ ಹಾಗೆ ಆ ಪ್ರತ್ಯೇಕ ಗುಂಪು ಯಾವುದು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top