fbpx
ಸಮಾಚಾರ

ನಾಳೆ ನಿಖಿಲ್ ಕುಮಾರ್- ರೇವತಿ ನಿಶ್ಚಿತಾರ್ಥ! ಏಪ್ರಿಲ್ 17ರಂದು ವಿವಾಹ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ಜೆಡಿಎಸ್ ರಾಜ್ಯ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥ ನಾಳೆ ನಗರದ ತಾಜ್‌ವೆಸ್ಟ್‌ ಹೊಟೇಲ್‌ನಲ್ಲಿ ನೆರವೇರಲಿದೆ. ನಿಶ್ಚಿತಾರ್ಥಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳು ಈಗಾಗಲೇ ತಾಜ್‌ವೆಸ್ಟ್‌ನಲ್ಲಿ ಭರದಿಂದ ಸಾಗಿವೆ.

ಜೆ.ಪಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡಿ, ನಾಳೆ ನಮ್ಮ ಕುಟುಂಬದಲ್ಲಿ ಶುಭ ಸಮಾರಂಭ ಇದೆ. ಎಲ್ಲಾ ಪಕ್ಷದ ಶಾಸಕರು, ನಾಯಕರು, ಮುಖಂಡರು, ಪ್ರಮುಖ ಕಾರ್ಯಕರ್ತರಿಗೆ ಆಹ್ವಾನ ನೀಡಲಾಗಿದೆ. ಏಪ್ರಿಲ್ 17ರಂದು ವಿವಾಹಕ್ಕೆ ಮುಹೂರ್ತ ನಿಗದಿಪಡಿಸಲಾಗುವುದು. ನಿಶ್ಚಿತಾರ್ಥದ ಬಳಿಕ ಮದುವೆಯ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದರು.

ಅಂದಹಾಗೆ ಇತ್ತೀಚಿಗೆ ರೇವತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದ ನಿಖಿಲ್ ‘ನನ್ನ ಸಂಗಾತಿಯಾಗುವವರ ಜೊತೆಗಿನ ಮೊದಲ ಫೋಟೊವನ್ನು ಶೇರ್ ಮಾಡ್ಕೊಳೋಕೆ ಖುಷಿ ಆಗ್ತಿದೆ. ಎಂದಿನಂತೆ ನನ್ನ ಮೇಲಿನ ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲೂ ಇರಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top