fbpx
ಸಮಾಚಾರ

ರಾಕಿ​ಗೆ ಡೆತ್​ ವಾರಂಟ್​ ನೀಡಲು ‘ಕೆಜಿಎಫ್​’ಗೆ ಬಂದ ರವೀನಾ ಟಂಡನ್​!

ಪ್ರಶಾಂತ್‌ ನೀಲ್ ನಿರ್ದೇಶನದ ‘ರಾಕಿಂಗ್‌ ಸ್ಟಾರ್‌’ ಯಶ್‌ ನಾಯಕನಾಗಿರುವ ‘ಕೆಜಿಎಫ್‌ ಚಾಪ್ಟರ್‌ 1’ ಕನ್ನಡ ಚಿತ್ರರಂಗದಲ್ಲಿ ಹಲವು ಮೈಲಿಗಲ್ಲುಗಳಿಗೆ ನಾಂದಿ ಹಾಡಿದ ಚಿತ್ರ. ಈಗ ಕೆಜಿಎಫ್ 2 ಸಿನಿಮಾದ ಶೂಟಿಂಗ್​ ಇದೀಗ ಅಂತಿಮ ಹಂತಕ್ಕೆ ಬರುತ್ತಿದ್ದು, ಸದ್ಯದ ಸುದ್ದಿ ಏನಂದರೆ, ಸಿನಿಮಾ ಟೀಂಗೆ ಬಾಲಿವುಡ್‌ ನಟಿ ರವೀನಾ ಟಂಡನ್‌ ಸೇರ್ಪಡೆಯಾಗಿದ್ದಾರೆ.

 

 

ನಿರ್ದೇಶಕ ಪ್ರಶಾಂತ್ ನೀಲ್ ಅವರು ರವೀನಾ ಟಂಡನ್ ಜೊತೆಗಿರುವ ಫೋಟೋ ಹಾಕಿ “ಡೆತ್ ವಾರೆಂಟ್ ಜಾರಿ ಮಾಡುವ ಮಹಿಳೆ ಬಂದಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಜಿಎಫ್ 2 ತಂಡಕ್ಕೆ ವೆಲ್‌ಕಮ್ ಎಂದು ಕೂಡ ಹೇಳಿದ್ದಾರೆ ಅವರು. ಇನ್ನು ಇಡೀ ಚಿತ್ರತಂಡ ಅವರನ್ನು ಸ್ವಾಗತ ಮಾಡಿದೆ. 20 ವರ್ಷಗಳ ನಂತರ ರವೀನಾ ಟಂಡನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈಹಿಂದೆ ಉಪೇಂದ್ರ ಸಿನಿಮಾದಲ್ಲಿ ರವೀನಾ ನಟಿಸಿದ್ದರು!

ಒಟ್ಟಾರೆಯಾಗಿ ‘ಕೆಜಿಎಫ್ 2’ ಚಿತ್ರ ಹಲವು ಕಾರಣಗಳಿಂದ ಕುತೂಹಲ ಸೃಷ್ಟಿಸಿದೆ. ‘ಕೆಜಿಎಫ್ 1’ ವಿಶ್ವದಾದ್ಯಂತ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲೂ ಕೂಡ ದಾಖಲೆ ಬರೆದಿತ್ತು. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ಬಂಡವಾಳವಿದೆ. ಈ ಸಿನಿಮಾದ ಶೂಟಿಂಗ್ ಕಾರ್ಯ ಭರದಿಂದ ಸಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top