fbpx
ಸಮಾಚಾರ

6 ವರ್ಷಗಳ ಬಳಿಕ ಕ್ರೀಸಿಗಿಳಿದ ಕ್ರಿಕೆಟ್ ದೇವರು ಸಚಿನ್: ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ; ವಿಡಿಯೋ ನೋಡಿ!

ವಿಶ್ವ ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ನಿವೃತ್ತಿ ಸಲ್ಲಿಸಿದ ಆರು ವರ್ಷಗಳ ಬಳಿಕ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕಾಳ್ಗಿಚ್ಚು ಪರಿಹಾರ ನಿಧಿ ಸಂಗ್ರಹಕ್ಕಾಗಿ ಮೆಲ್ಬೋರ್ನ್‌ನ ಜಂಕ್ಷನ್ ಓವಲ್‌ನಲ್ಲಿ ಭಾನುವಾರ ನಡೆದ ‘ಬುಷ್ ಫೈರ್’ ಕ್ರಿಕೆಟ್ ಪಂದ್ಯದ ವೇಳೆಯಲ್ಲಿ ಇನ್ನಿಂಗ್ಸ್ ಬ್ರೇಕ್ ವೇಳೆ ಸಚಿನ್ ಅವರು ಒಂದು ಓವರ್ ಬ್ಯಾಟಿಂಗ್ ನಡೆಸಿದರು!

ಆಸ್ಟ್ರೇಲಿಯಾ ಮಹಿಳಾ ತಂಡದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರಿ ಅವರ ಓವರ್‌ವೊಂದರಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಮಾಡಿದರು. ಅಲ್ಲದೆ ಬೌಂಡರಿ ಬಾರಿಸುವ ಮೂಲಕ ಗಮನ ಸೆಳೆದರು.

 

 

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಆಲ್‍ರೌಂಡರ್ ಎಲಿಸ್ ಪೆರ್ರಿ ಅವರ ವಿಡಿಯೋವನ್ನು ಟ್ವೀಟ್ ಮಾಡಿತ್ತು. ಈ ವಿಡಿಯೋದಲ್ಲಿ ಎಲಿಸ್ ಪೆರ್ರಿ, ಹಾಯ್ ಸಚಿನ್. ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ನೀವು ರಿಕ್ಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿರುವುದು ನನಗೆ ಗೊತ್ತಿದೆ. ಪಂದ್ಯದ ವಿಶ್ರಾಂತಿ ವೇಳೆ ಒಂದು ಓವರ್ ಆಡಲು ನೀವು ನಿವೃತ್ತಿಯಿಂದ ಹೊರಬಂದರೆ ನಾವು ಹೆಚ್ಚು ಖುಷಿ ಪಡುತ್ತೇವೆ ಎಂದು ಕೇಳಿಕೊಡಿದ್ದರು.

 

 

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿನ್, ಉತ್ತಮ ಮನವಿ ಎಲಿಸ್. ನಾನು ಅಲ್ಲಿಗೆ ಹೋಗಲು ಮತ್ತು ಒಂದು ಓವರ್ ಬ್ಯಾಟ್ ಮಾಡಲು ಇಷ್ಟಪಡುತ್ತೇನೆ. ನನ್ನ ಭುಜದ ಗಾಯದಿಂದಾಗಿ ವೈದ್ಯರು ಆಡದಂತೆ ಸಲಹೆ ನೀಡಿದ್ದಾರೆ. ಈಗ ನಾನು ಆಡುವುದು ಅವರ ಸಲಹೆಗೆ ವಿರುದ್ಧವಾಗಿರುತ್ತದೆ. ಆದರೂ ಮೈದಾಕ್ಕಿಳಿಯುತ್ತೇನೆ ಎಂದು ತಿಳಿಸಿದ್ದರು!

ಅಂದಹಾಗೆ ಬುಶ್ ಫೈರ್ ಸಂತ್ರಸ್ತರ ಹಾಗೂ ಪರಿಹಾರಕ್ಕಾಗಿ ನಿಧಿ ಸಂಗ್ರಹಿಸುವುದಕ್ಕಾಗಿ ಸಹಾಯಾರ್ಥ ಪಂದ್ಯವನ್ನು ಏರ್ಪಡಿಸಲಾಗಿತ್ತು. ಮೆಲ್ಬರ್ನ್ ನ ಜಂಕ್ಷನ್ ಓವಲ್ ಮೈದಾನದಲ್ಲಿ ಭಾನುವಾರ ಬುಷ್ ಪೈರ್ ಪಂದ್ಯ ನಡೆಡಿದ್ದು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಗಳಾದ ಆಡಂ ಗಿಲ್‍ಕ್ರಿಸ್ಟ್ ಹಾಗೂ ರಿಕ್ಕಿ ಪಾಂಟಿಂಗ್ ನೇತೃತ್ವದ ತಂಡಗಳು ಆಡಿದವು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ರಿಕ್ಕಿ ಪಾಂಟಿಂಗ್ ತಂಡದ ಕೋಚ್ ಆಗಿದ್ದರು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top