fbpx
ಸಮಾಚಾರ

“ಪುತ್ರಿ ಅಥಿಯಾ ಶೆಟ್ಟಿ ಜೊತೆ ಕೆಎಲ್ ರಾಹುಲ್ ಡೇಟಿಂಗ್” ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುನಿಲ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್‌, ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಬಾಲಿವುಡ್ ನಟಿ, ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ರಿಲೇಶನ್‍ನಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ವಿಚಾರವಾಗಿ ಸ್ವತಃ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

“ನಾನು ಕೆಎಲ್ ರಾಹುಲ್ ಜೊತೆ ಯಾವುದೇ ಸಂಬಂಧ ಹೊಂದಿಲ್ಲ. ನೀವು(ಮಾಧ್ಯಮ) ಪುತ್ರಿ ಅಥಿಯಾಳನ್ನು ಕೇಳಿ” ಎಂದು ಇಂಗ್ಲೀಷ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪುತ್ರಿ ಡೇಟಿಂಗ್ ಸುದ್ದಿ ಸರಿಯೋ? ತಪ್ಪೋ ಎಂಬುದನ್ನು ನನಗೆ ತಿಳಿಸಿ, ಬಳಿಕ ಈ ಕುರಿತು ನಾನು ಮಾತನಾಡುತ್ತೇನೆ. ನೀವೂ ಊಹಾಪೋಹಗಳನ್ನು ಹೇಳುತ್ತಿದ್ದೀರಿ. ನಿಮಗೆ ತಿಳಿದಿಲ್ಲ ಎಂದಾದರೆ, ನನ್ನನ್ನು ಹೇಗೆ ಕೇಳುವಿರಿ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.

ಅಂದಹಾಗೆ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಮತ್ತು ಕೆ.ಎಲ್.ರಾಹುಲ್ ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು! ಇಬ್ಬರೂ ತಮ್ಮ ಸ್ನೇಹಿತರೊಂದಿಗೆ ಹೊಸ ವರ್ಷದಂದು ಥೈಲ್ಯಾಂಡ್‍ಗೆ ಹೋಗಿದ್ದರು. ಈ ವೇಳೆ ರಾಹುಲ್ ತಮ್ಮ ಇನ್‍ಸ್ಟಾಗ್ರಾಮ್ ದಲ್ಲಿ ಅಥಿಯಾರೊಂದಿಗೆ ಇರುವ ಫೋಟೋ ಪೋಸ್ಟ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top