fbpx
ಸಮಾಚಾರ

“ದೇಶದಲ್ಲಿ ಆರ್ಥಿಕ ಸಮಸ್ಯೆ ಇಲ್ಲ ಎನ್ನುವುದಕ್ಕೆ ಜನರು ಬಟ್ಟೆ ಹಾಕಿಕೊಳ್ಳುತ್ತಿರುವುದೇ ಸಾಕ್ಷಿ” ಸಂಸದ ವೀರೇಂದ್ರ ಸಿಂಗ್

“ದೇಶದಲ್ಲಿ ಆರ್ಥಿಕ ಸಮಸ್ಯೆ ಇಲ್ಲ ಎನ್ನುವುದಕ್ಕೆ ದೇಶದ ಜನರು ಇನ್ನೂ ಬಟ್ಟೆ ಹಾಕಿಕೊಳ್ಳುತ್ತಿರುವುದೇ ಸಾಕ್ಷಿ” ಎಂದು ಬಿಜೆಪಿ ಸಂಸದ ವೀರೇಂದ್ರ ಸಿಂಗ್​​ ಮಸ್ತ್ ಅವರು ಹೇಳಿದ್ದಾರೆ. ದೇಶದಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿಲ್ಲ. ಜನ ಧೋತಿ, ಕುರ್ತಾ ಧರಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ!

 

 

ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೀರೇಂದ್ರ ಸಿಂಗ್ “ವಿಶ್ವದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿರಬಹುದು, ಆದರೆ ಭಾರತದಲ್ಲಿ ಆರ್ಥಿಕಕತೆ ಉತ್ತಮ ರೀತಿಯಲ್ಲಿಯೇ ಇದೆ! ಭಾರತ ಆರ್ಥಿಕತೆ ಗ್ರಾಮೀಣ ಪ್ರದೇಶದ ಮತ್ತು ಕೃಷಿಯಿಂದ ಭದ್ರವಾಗಿದೆ ಎಂದಿದ್ದಾರೆ. ಬ್ಯಾಂಕಿಂಗ್ ವರದಿಗಳ ಪ್ರಕಾರ, ಗ್ರಾಮೀಣ ಪ್ರದೇಶದ ಜನರೇ ಬ್ಯಾಂಕ್ ಗಳಲ್ಲಿ ಹೆಚ್ಚು ಹಣ ಠೇವಣಿ ಮಾಡಿರುತ್ತಾರೆ ಎಂದು ವೀರೇಂದ್ರ ಸಿಂಗ್ ಅವರು ತಿಳಿಸಿದ್ದಾರೆ.

“ಒಂದು ವೇಳೆ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದರೆ ನಾವ್ಯಾರೂ ಧೋತಿ, ಕುರ್ತಾ, ಕೋಟ್, ಜಾಕೇಟ್ ಮತ್ತು ಪ್ಯಾಂಟ್ ಗಳನ್ನು ಧರಿಸುತ್ತಿರಲಿಲ್ಲ. ಹಾಗಾಗಿ ಭಾರತದಲ್ಲಿ ಆರ್ಥಿಕ ಕುಸಿತ ಕಂಡುಬಂದಿಲ್ಲ” ಎಂದು ವೀರೇಂದ್ರ ಸಿಂಗ್ ಹೇಳಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top