fbpx
ಸಮಾಚಾರ

ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ನಲಪಾಡ್​ನ ಮತ್ತೆ ಪುಂಡಾಟ; ಸರಣಿ ಅಪಘಾತ ಮಾಡಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ನಲಪಾಡ್?

ಯುಬಿ ಸಿಟಿ ಗಲಾಟೆ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ಮೊಹಮ್ಮದ್ ನಲಪಾಡ್ ಇತ್ತೀಚಿನ ದಿನಗಳಲ್ಲಿ ರಾಜಕಾರಣಕ್ಕೆ ಬರುವ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ನಲಪಾಡ್ ಕಾರ್ ಅಪಘಾತ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

ಭಾನುವಾರ ಮೇಖ್ರಿ ಸರ್ಕಲ್ ಅಂಡರ್ ಪಾಸ್‍ನಲ್ಲಿ ಸರಣಿ ಅಪಘಾತ ಮಾಡಿ ಲ್ಯಾಂಬೋರ್ಗಿನಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಚಾಲಕ ಯಾರು ಎನ್ನುವುದು ತನಿಖೆಯಿಂದ ಪೊಲೀಸರಿಗೆ ಗೊತ್ತಾಗಿದೆ. ಕಾರಿನ ಚಾಲಕ ಶಾಂತಿನಗರದ ಶಾಸಕ ಎಸ್.ಎ.ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದ್ದು, ಈಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ನಿನ್ನೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ಬಂದು ನಾನೇ ಕೃತ್ಯ ಮಾಡಿದ್ದು ಎಂದು ಶರಣಾಗಲು ಬಂದಿದ್ದ. ಆದರೆ ಈಗ ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ಆ ಕಾರು ಚಲಾಯಿಸುತ್ತಿದ್ದುದು ಮೊಹಮ್ಮದ್ ನಲಪಾಡ್​ನೇ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ಅಭಿಪ್ರಾಯಕ್ಕೆ ಬಂದಿದ್ದಾರೆ.. ಬೈಕ್ ಸವಾರನ ಕಾಲಿಗೆ ಗಂಭೀರವಾಗಿ ಏಟು ಬಿದ್ದಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಅಪಘಾತ ಮಾಡಿದ್ದು, ಮೊಹಮ್ಮದ್ ನಲಪಾಡ್ ಎಂದು ಗೊತ್ತಾಗಿದೆ. ಈಗ ನಲಪಾಡ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಪೊಲೀಸರು ನಿರ್ಧಾರಿಸಿದ್ದಾರೆ. ಹೀಗಾಗಿ ಪೊಲೀಸ್ ನೋಟಿಸ್ ತಲುಪಿದ ತಕ್ಷಣ ವಿಚಾರಣೆಗೆ ಹಾಜರಾಗಬೇಕಾಗುತ್ತೆ. ವಿಚಾರಣೆಗೆ ಹಾಜರಾದಾಗ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಮಗೆ ಖಚಿತ ಸಾಕ್ಷ್ಯಾಧಾರಗಳ ಮೇಲೆ ನಲಪಾಡ್‍ಯೇ ಕಾರ್ ಓಡಿಸುತ್ತಿದ್ದನು ಎಂದು ತಿಳಿದುಬಂದಿದೆ. ನ್ಯಾಯಾಲಯಕ್ಕೆ ನಾವು ದೋಷಾರೋಪಣ ಪಟ್ಟಿಯನ್ನು ಸಲ್ಲಿಸುತ್ತೇವೆ. ನ್ಯಾಯಾಲಯವು ಶಿಕ್ಷೆಯನ್ನು ತೀರ್ಮಾನ ಮಾಡುತ್ತದೆ ಎಂದು ಡಿಸಿಪಿ ವಿವರಿಸಿದರು!

ಏನಿದು ಘಟನೆ?
ಫೆ.9ರ ಮಧ್ಯಾಹ್ನ 2.30ರ ಸುಮಾರಿಗೆ ಮೇಖ್ರಿ ಸರ್ಕಲ್‌ ಅಂಡರ್‌ ಪಾಸ್‌ ಮೂಲಕ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕಾರು ಸರಣಿ ಅಪಘಾತಕ್ಕೆ ಕಾರಣ ಆಗಿತ್ತು. ಅಂಡರ್‌ಪಾಸ್‌ನಲ್ಲಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಬಳಿಕ ಆಟೊಗೆ ಡಿಕ್ಕಿಯಾಗಿತ್ತು. ಪರಿಣಾಮವಾಗಿ ಆಟೊ ಚಾಲಕ ಸುಹೇಲ್‌ ಮತ್ತು ಆಟೊದಲ್ಲಿ ಪ್ರಯಾಣ ಮಾಡುತ್ತಿದ್ದ ಸಬೀಹಾ ಮತ್ತು ಅವರ ಆರು ವರ್ಷದ ಬಾಲಕನಿಗೆ ಗಾಯಗಳಾಗಿದ್ದವು. ಅಪಘಾತದ ಬಳಿಕ ಐಷಾರಾಮಿ ಕಾರಿನ ಚಾಲಕ ಸ್ಥಳದಲ್ಲೇ ಕಾರನ್ನು ಬಿಟ್ಟು ಹೊರಟು ಹೋಗಿದ್ದಾಗಿ ಎಫ್‌ಐಆರ್‌ ದಾಖಲಾಗಿದೆ. ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದೂ ಎಫ್‌ಐಆರ್‌ನಲ್ಲಿ ನಮೂದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top