fbpx
ಸಮಾಚಾರ

ಫೆಬ್ರವರಿ 24 ಕ್ಕೆ ಇದೇ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕಾ ಅಧ್ಯಕ್ಷ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆ.24 ಮತ್ತು 25ರಂದು ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇದೇ 24 ಮತ್ತು 25ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಭಾರತಕ್ಕೆ ತೆರಳುತ್ತಾರೆ ಎಂದು ಎಂದು ವೈಟ್‍ಹೌಸ್ ಮಂಗಳವಾರ ಅಧಿಕೃತವಾಗಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.

 

 

ಟ್ರಂಪ್​ ಮತ್ತು ಅವರ ಹೆಂಡತಿ ಮೆಲಾನಿಯಾ ಫೆ.24ರಂದು ಭಾರತಕ್ಕೆ ಬಂದಿಳಿಯಲಿದ್ದಾರೆ. ಟ್ರಂಪ್​ ಭೇಟಿ ‘ಅಮೆರಿಕ ಮತ್ತು ಭಾರತದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ಶ್ವೇತ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾದ ನಂತರ ಭಾರತಕ್ಕೆ ಕೈಗೊಳ್ಳುತ್ತಿರುವ ಮೊದಲ ಪ್ರವಾಸವಿದು. ಈ ಪ್ರವಾಸದಲ್ಲಿ ಟ್ರಂಪ್‌ ಮತ್ತು ಅವರ ಪತ್ನಿ ದೆಹಲಿ ಮತ್ತು ಅಹಮದಾಬಾದ್‌ಗೆ ಭೇಟಿ ನೀಡಲಿದ್ದಾರೆ. ಟ್ರಂಪ್‌ ಅವರಿಗೂ ಹಿಂದೆ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಅವರು 2010 ಮತ್ತು 2015ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top