fbpx
ಸಮಾಚಾರ

ಸಾಲದ ಸುಳಿಯಲ್ಲಿ ಸಿಲುಕಿದ್ದವನ ಜೀವನ ಬದಲಿಸಿದ ಲಾಟರಿ: ಕೂಲಿಗಾರನಿಗೆ ಒಲಿಯಿತು 12 ಕೋಟಿ ರೂ. ಬಂಪರ್

ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರವೊಂದು ಬದುಕನ್ನೇ ಬದಲಾಯಿಸಿಬಿಡುತ್ತದೆ. ಇದಕ್ಕೆ ಉದಾಹರಣೆಯೆಂಬಂತೆ ಕೇರಳದ ಕೂಲಿ ಕಾರ್ಮಿಕನೋರ್ವ ದಿಢೀರ್ ಎಂದು ಕೋಟ್ಯಾಧಿಪತಿಯಾಗಿದ್ದಾರೆ. ಹೌದು, ಒಂದಲ್ಲಾ ಒಂದು ದಿನ ತನ್ನ ಅದೃಷ್ಟ ಖುಲಾಯಿಸುತ್ತದೆ ಎಂಬ ಆಸೆಯಿಂದ ಲಾಟರಿ ಖರೀದಿ ಮಾಡುತ್ತಿದ್ದ ಕೂಲಿ ಕಾರ್ಮಿಕ ಈಗ 12 ಕೋಟಿ ರೂ.ಗಳ ಒಡೆಯ!

ಹೌದು, ಕೇರಳದ ಕುರುಚಿಯಾ ರಾಜನ್ ಅವರಿಗೆ 12 ಕೋಟಿ ರು ಲಾಟರಿ ಹಣ ಬಂದಿದೆ, ತಮ್ಮ ಮನೆಯ ನಿರ್ಮಾಣ ಕೆಲಸ ಅ ರ್ಧಕ್ಕೆ ನಿಂತಿತ್ತು, ಇದರಿಂದ ರಾಜನ್ ತೀವ್ರ ಅಸಮಾಧಾನ ಗೊಂಡಿದ್ದರು. ಮಗಳ ಮದುವೆಗೂ ಕೂಡ ಸಾಲ ಮಾಡಿದ್ದರು, ಹೀಗಾಗಿ 4ನೇ ಬಾರಿಗೆ ಬ್ಯಾಂಕ್ ನಲ್ಲಿ ಸಾಲ ಮಾಡಲು ಹೊರಟಿದ್ದರು. ಹೊರಡುವ ಮುನ್ನ 300 ರೂ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಅದನ್ನು ಯಾರೋಂದಿಗೂ ಹೇಳಿರಲಿಲ್ಲ.

ರಬ್ಬರ್‌ ಟ್ಯಾಪಿಂಗ್‌ ಕೆಲಸ ಮಾಡುವ ರಾಜನ್‌ ಕಳೆದ ವರ್ಷ ದೊಡ್ಡ ಮಗಳ ಮದುವೆ ಮಾಡಿದ್ದ. ಬಳಿಕ ಆತನ ಮೇಲೆ ಸುಮಾರು 7 ಲಕ್ಷ ರು. ಭಾರೀ ಸಾಲದ ಹೊರೆ ಕೂತಿತ್ತು. ಈ ನಡುವೆ ಹಣ ಇಲ್ಲದೆ ಹೊಸದಾಗಿ ಕಟ್ಟಿದ್ದ ಮನೆ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸಿದ್ದ. ಮಗ ಕೂಡಾ ವಿದ್ಯಾಭ್ಯಾಸ ಬಿಟ್ಟು ಕುಟುಂಬ ಸಾಕುವ ಹೊಣೆ ಹೊತ್ತುಕೊಂಡಿದ್ದ.

ಸಾಲ ಮತ್ತು ಬಡ್ಡಿ ಹೊರೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮತ್ತೊಮ್ಮೆ ಬ್ಯಾಂಕ್‌ಗೆ ತೆರಳಿದ್ದ ರಾಜನ್‌, ಮತ್ತೊಮ್ಮೆ ಸಾಲ ಪಡೆಯುವ ಯತ್ನ ಮಾಡಿದ್ದ. ಹೊಸ ಸಾಲ ಪಡೆದು, ಹಳೆ ಸಾಲ ತೀರಿಸುವ ಯೋಜನೆ ಆತನದ್ದಾಗಿತ್ತು. ಆದರೆ ಬ್ಯಾಂಕ್‌ನವರು ಸಾಧ್ಯವೇ ಇಲ್ಲ ಎಂದಿದ್ದರು. ಬೇಸರದಿಂದಲೇ ಮನೆಯತ್ತ ಹೆಜ್ಜೆ ಹಾಕಿದ್ದ ರಾಜನ್‌, ದಾರಿಯಲ್ಲಿ ತನ್ನ ಎಂದಿನ ಲಾಟರಿ ಕೊಳ್ಳುವ ಹವ್ಯಾಸದಂತೆ ಲಾಟರಿ ಟಿಕೆಟ್‌ ಖರೀದಿಸಿದ್ದ. ಅದು ಕೇರಳ ಸರ್ಕಾರ ಪ್ರತಿ ವರ್ಷ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ವೇಳೆ ನಡೆಸುವ ಬಂಪರ್‌ ಬಹುಮಾನದ ಲಾಟರಿ ಆಗಿತ್ತು. ಟಿಕೆಟ್‌ ದರವೂ ಭರ್ಜರಿ 300 ರುಪಾಯಿ ಇತ್ತು.

ನಾನು ಯಾವಾಗಲೂ ಲಾಟರಿ ಖರೀದಿಸುತ್ತಿರುತ್ತೇನೆ ಎಂದು ನನ್ನ ಪತ್ನಿ ನನ್ನ ಜೊತೆ ಜಗಳವಾಡುತ್ತಿದ್ದಳು. ಅದಕ್ಕೆ ನಾನು ಲಾಟರಿ ಖರೀದಿಸಿದ್ದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆದರೆ ಮಂಗಳವಾರ ಬೆಳಗ್ಗೆ ಕುತೂಹಲದಿಂದ ಕಾಯುತ್ತಿದ್ದೆ. ಆಗ ನಾನು ಖರೀದಿಸಿದ ಲಾಟರಿ ಉಪಯೋಗಕ್ಕೆ ಬಂದಿದ್ದು, ಹಣವಿಲ್ಲದೆ ಸಾಲ ಪಡೆಯಲು ಹೋಗುತ್ತಿದ್ದ ನನಗೆ ಕೋಟಿಗಟ್ಟಲೆ ಹಣ ಸಿಕ್ಕಿದೆ ಎಂದರು.

ಲಾಟರಿಯಿಂದ ಹಣ ಬಂದಿದ್ದರಿಂದ ನನಗೆ ಸಿಕ್ಕಾಪಟ್ಟೆ ಸಂತೋಷವಾಗಿದೆ ಎಂದು ರಾಜನ್ ಹೀಳಿದ್ದರು. ಈ ಬಗ್ಗೆ ಕುಟುಂಬಸ್ಥರಿಗೆ ತಿಳುತ್ತಿದ್ದಂತೆ ಖುಷಿಯಾಗಿದೆ ಎಂದು ರಾಜನ್ ಅವರ ಕುಟುಂಬವೂ ಸಂತೋಷ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top