fbpx
ಸಮಾಚಾರ

ಕಿರುತೆರೆ ನಟಿ ಜೊತೆಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ನಟ/ನಿರ್ದೇಶಕ ಶ್ರವಂತ್ !

‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಟಿ ರಾಧಿಕಾರನ್ನು ನಟ ಮತ್ತು ನಿರ್ದೇಶಕ ಶ್ರವಂತ್ ಮದುವೆ ಮಾಡಿಕೊಂಡಿದ್ದಾರೆ! ಈ ದಂಪತಿಯ ಮದುವೆಗೆ ಕಿರುತೆರೆ ಕಲಾವಿದರು ಮತ್ತು ಸ್ನೇಹಿತರು ಹೋಗಿ ನವಜೋಡಿಗೆ ಶುಭಾ ಹಾರೈಸಿದ್ದಾರೆ.

ಶ್ರವಂತ್‌ ಹಾಗೂ ರಾಧಿಕಾ ಸಾಂಪ್ರದಾಯಿಕವಾಗಿ ಫೆಬ್ರವರಿ 13ರಂದು ಸಪ್ತಪದಿ ಏರಿದ್ದಾರೆ. ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಹೊಸ ಬದುಕಿಗೆ ನಾಂದಿ ಹಾಡಿದ್ದಾರೆ. ಶ್ರವಂತ್ ಮತ್ತು ರಾಧಿಕಾ ವಿವಾಹಕ್ಕೆ ಕಿರುತೆರೆ ಲೋಕದ ನಟ-ನಟಿಯರು ಸಾಕ್ಷಿ ಆಗಿದ್ದರು.

‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರು ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಈ ಹಿಂದೆ ‘ಪುಟ್ಟಮಲ್ಲಿ’ ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು.

ಇನ್ನು ಶ್ರವಂತ್ ಕೂಡ ನಟರಾಗಿದ್ದು, ‘ಪರಾರಿ’, ‘ಅಂಬರ’ ಮತ್ತು ‘ಚಿಕ್ಕಮಗಳೂರು ಚಿಕ್ಕಮಲ್ಲಿಗೆ’ ಸಿನಿಮಾದಲ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಹಿಂದೆ ‘ಮಧುಬಾಲ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಪ್ರಸ್ತುತ ಧಾರಾವಾಹಿಯೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top