fbpx
ಸಮಾಚಾರ

ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿದ ನಿಖಿಲ್-ರೇವತಿ ಜೋಡಿ

ನಿಶ್ಚಿತಾರ್ಥ ಬಳಿಕ ಮೊದಲ ಬಾರಿಗೆ ರೇವತಿ ಹಾಗೂ ನಿಖಿಲ್ ಕುಮಾರಸ್ವಾಮಿ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ! ಪ್ರೇಮಿಗಳ ದಿನಾಚರಣೆಯನ್ನು ನಿಖಿಲ್ ಕುಮಾರ್ ಮತ್ತು ರೇವತಿ ಬಹಳ ವಿಶೇಷವಾಗಿ ಆಚರಿಸಿದ್ದಾರೆ.

ಹೌದು, ನಿಖಿಲ್ ಕುಮಾರ್ ಮತ್ತು ರೇವತಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದರು. ಈ ವೇಳೆ ರೇವತಿ ಅವರ ತಾಯಿ ಕೂಡ ಇದ್ದರು. ನಿಖಿಲ್ ಕುಮಾರ್ ಮತ್ತು ರೇವತಿ ಅವರನ್ನು ಒಟ್ಟಿಗೆ ದೇವಸ್ಥಾನದಲ್ಲಿ ನೋಡಿದ ಜನರು, ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

 

 

ಇದೇ ವೇಳೆ ದೇವಸ್ಥಾನಕ್ಕೆ ಬಂದಿದ್ದ ಜನರ ಜೊತೆ ನಿಖಿಲ್ ಮತ್ತು ರೇವತಿ ಕುಳಿತು ದೇವಸ್ಥಾನದಲ್ಲಿ ಊಟ ಮಾಡಿದರು. ನಂತರ ಇದೇ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ”ವಿಶ್ವ ಪ್ರೇಮಿ ದಿನಾಚರಣೆಯ ಈ ದಿನದಂದು ಆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಾನು ಹಾಗು ರೇವತಿಯವರು ಅಮ್ಮನ ಆಶೀರ್ವಾದ ಪಡೆದ ಸುಂದರ ಕ್ಷಣಗಳು.” ಎಂದು ಬರೆದುಕೊಂಡಿದ್ದಾರೆ!

ಅಂದಹಾಗೆ ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿ ಅವರ ನಿಶ್ಚಿತಾರ್ಥ ಫೆ. 10ರಂದು ಅದ್ಧೂರಿಯಾಗಿ ನೆರವೇರಿದ್ದು, ಏಪ್ರಿಲ್​ 17ರಂದು ವಿವಾಹ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top