fbpx
ಸಮಾಚಾರ

ಅಭಿಮಾನಿಗಳ ಕಾತರಕ್ಕೆ ಬಿತ್ತು ತೆರೆ: ಹೊಚ್ಚ ಹೊಸ ಲೋಗೋ ಅನಾವರಣ ಮಾಡಿದ RCB

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಕಳೆದ ಎರಡು ದಿನಗಳಿಂದ ಭಾರೀ ಸುದ್ದಿಯಲ್ಲಿತ್ತು. ತನ್ನ ಅಧಿಕೃತ ಟ್ವಿಟ್ಟರ್, ಫೇಸ್​ಬುಕ್​, ಇನ್​ಸ್ಟಾಗ್ರಾಂ ಹಾಗೂ ಯೂ ಟ್ಯೂಬ್ ಖಾತೆಯಲ್ಲಿನ ಪ್ರೊಫೈಲ್ ಫೋಟೋ ತೆಗೆದು ಸಾಕಷ್ಟು ಕುತೂಹಲ ಕೆರಳಿಸಿತ್ತು. ಸದ್ಯ ಆರ್​ಸಿಬಿ ಹೊಸ ಲೋಗೋ, ನೂತನ ಫ್ಲಾಗ್​ನೊಂದಿಗೆ ಕಮ್​ಬ್ಯಾಕ್ ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಹೊಸ ಲಾಂಛನದ ಬಿಡುಗಡೆ ಮಾಡಿದೆ. ಈ ಬಗ್ಗೆ ಎದ್ದಿರುವ ಎಲ್ಲ ಊಹಾಪೋಹಾಗಳಿಗೂ ತೆರೆ ಎಳೆದಿರುವ ಆರ್‌ಸಿಬಿ ಫ್ರಾಂಚೈಸಿಯು ಬ್ರ್ಯಾಂಡ್ ನ್ಯೂ ಲೊಗೊ ಬಿಡುಗಡೆ ಮಾಡಿದೆ. ಹೊಸ ದಶಕದ ಆರಂಭದೊಂದಿಗೆ ಆರ್‌ಸಿಬಿ ಸಂಪೂರ್ಣ ಹೊಸತನದೊಂದಿಗೆ ಕಣಕ್ಕಿಳಿಯಲಿದೆ. ಇದರಂತೆ ಹೊಸ ಲಾಂಛನದ ಅನಾವರಣವಾಗಿದೆ.

 

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಿಡುಗಡೆ ಮಾಡಿರುವ ಹೊಸ ಲಾಂಛನವು ಕೆಂಪು ಹಿನ್ನೆಲೆ, ಗೋಲ್ಡನ್ ಲಯನ್ ಮತ್ತು ಕಪ್ಪು ಬಣ್ಣದಲ್ಲಿ ತಂಡದ ಹೆಸರನ್ನು ಹೊಂದಿದೆ. ಇಲ್ಲಿ ಮೆಜೆಸ್ಟಿಕ್ ಸಿಂಹವು ಆರ್‌ಸಿಬಿ ತತ್ವಶಾಸ್ತ್ರಕ್ಕೆ ಜೀವವನ್ನು ತುಂಬುತ್ತಿದ್ದು, ದಿಟ್ಟ ಹಾಗೂ ನಿರ್ಭಿತಿಯ ಮನೋಭಾವಾದ ಕ್ರಿಕೆಟ್ ಆಡುವುದರ ಸಂಕೇತವನ್ನು ನೀಡುತ್ತದೆ. ಇನ್ನು ಹಳೆಯ ಲೋಗೋ ರೀತಿಯ ಹೋಲಿಕೆಯೇ ಇಲ್ಲೂ ಇದೆಯಾದರೂ ಹೊಸ ಲೋಗೋ ಹಳೆಯದಕ್ಕಿಂತ ಕೊಂಚ ಭಿನ್ನವಾಗಿದೆ.

ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿನ ಡಿಪಿ(ಡಿಸ್‌ಪ್ಲೇ ಪಿಕ್ಚರ್) ಹಾಗೂ ಕವರ್ ಫೋಟೋಗಳನ್ನು ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಹಲವು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ, ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಸೇರಿದಂತೆ ಹಲವರು ಟ್ವೀಟ್ ಮೂಲಕ ಏನಾಗಿದೆ ಎಂದೆಲ್ಲ ವಿಚಾರಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top