fbpx
ಸಮಾಚಾರ

ಸರ್ಕಾರೀ ಶಾಲೆಯನ್ನು ಆಧುನಿಕ ಸೌಕರ್ಯಗಳ ಮೂಲಕ ನವೀಕರಣಗೊಳಿಸಿದ ಸಂಸದ ಜಿಸಿ ಚಂದ್ರಶೇಖರ್!

ರಾಜ್ಯಸಭಾ ಸದಸ್ಯರಾದ ಜಿಸಿ ಚಂದ್ರಶೇಖರ್ ಅವರು ತಮ್ಮ ಸಂಸದರ ನಿಧಿಯಿಂದ ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗೆದರನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಉತ್ತಮಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡು ಉದ್ಘಾಟಿಸಿದ್ದಾರೆ.

ಈ ಯೋಜನೆಯಲ್ಲಿ ಖಾಸಗಿ ಶಾಲೆಗಳನ್ನೂ ಮೀರಿಸುವ ರೀತಿ ಸ್ಮಾರ್ಟ್ ಕ್ಲಾಸ್ ರೂಮ್ ಗಳನ್ನು ಸ್ಥಾಪಿಸಲಾಗಿದ್ದು ಆಧುನಿಕ ಕಲಿಕಾ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ನೀಡಬಹುದು. ಹೆಣ್ಣುಮಕ್ಕಳ ಶುಚಿತ್ವ ಹಾಗೂ ಆರೋಗ್ಯದ ದೃಷ್ಟಿಯಿಂದ #ಹೆಣ್ಣುಮಕ್ಕಳಹೆಮ್ಮೆ #girlspride ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಶೌಚಾಲಯ ದುರಸ್ತಿ ಹಾಗೂ ನವೀಕರಣ, ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್, ನೀರಿನ ಸೌಕರ್ಯ ಕೊಳವೆಗಳ ದುರಸ್ತಿ ಮಾಡಿಸಲಾಗಿದೆ.

 

 

ಹಾಗೆಯೇ ಸುಮಾರು ಹತ್ತರಿಂದ ಹದಿನೈದು ಕೊಠಡಿಗಳಿಗೆ ಅಗತ್ಯವಾಗಿರುವ ವಿದ್ಯುತ್ ಶಕ್ತಿಯನ್ನು ಒದಗಿಸಲು ಸಹಾಯವಾಗುವಂತೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಶಾಲಾ ಕೊಠಡಿ ದುರಸ್ತಿ ನವೀಕರಣ ಜೊತೆಗೆ ಕಲಿಯಲು ಪ್ರತ್ಯೇಕವಾದ ಪರಿಸರವನ್ನು ಸೃಷ್ಟಿಮಾಡುವ ಹಸಿರು ಶಾಲಾ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ.

ನೆನ್ನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜಿಸಿ ಚಂದ್ರಶೇಖರ್ ಅವರೇ ಪಾಲ್ಗೊಂಡು ಸ್ವತಃ ಅವರೇ ಸದರಿ ಸೌಕರ್ಯಗಳನ್ನು ಉದ್ಘಾಟನೆ ಮಾಡಿದ್ದಾರೆ.. ಈ ವೇಳೆ ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್ ಹಾಗೂ ಬಿಬಿಎಂಪಿ ಸದಸ್ಯೆ ಲಲಿತ ತಿಮ್ಮಯ್ಯನವರು ಮತ್ತು ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ವಾಗುವಂತಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು. ಈ ವರ್ಷ 10ನೇ ತರಗತಿಯ ಪರೀಕ್ಷೆಯಲ್ಲಿ ಇಡೀ ಶಾಲೆಗೆ ಅತಿ ಹೆಚ್ಚು ಅಂಕ ಪಡೆಯುವ ಇಬ್ಬರು ವಿದ್ಯಾರ್ಥಿಗಳ ಮುಂದಿನ ವ್ಯಾಸಂಗದ ಕಾಲೇಜು ಫೀಸಿನ ಖರ್ಚನ್ನು ಸ್ವತಃ ತಾವೇ ಭರಿಸುವುದಾಗಿ ಇದೇ ವೇಳೆ ಭರವಸೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top