fbpx
ಸಮಾಚಾರ

“ಮುಂದಿನ ಜನ್ಮದಲ್ಲೂ ನೀವೇ ಸಂಗಾತಿಯಾಗಬೇಕು” ಭಾವಿ ಪತ್ನಿಯ ಕೈಬರಹ ಹಂಚಿಕೊಂಡ ನಿಖಿಲ್‌!

ನಿಖಿಲ್ ರೇವತಿ ಕಲ್ಯಾಣಕ್ಕೆ ಜಾಗವೂ ಫಿಕ್ಸ್ ಆಗಿದೆ. ದಿನಾಂಕವೂ ನಿಗದಿಯಾಗಿದೆ. ಏಪ್ರಿಲ್ 17 ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೀಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಹವಾ ಸೃಷ್ಟಿಸಿದೆ. ರೇವತಿ ಹಸ್ತಾಕ್ಷರದಲ್ಲಿ ಬರೆದಿರುವ ಸಾಲುಗಳನ್ನು ನಿಖಿಲ್ ಮೆಚ್ಚಿ ಕೊಂಡಾಡಿದ್ದಾರೆ. ಕೈಬರಹಕ್ಕೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. ನಿಖಿಲ್ ಹಂಚಿಕೊಂಡ ನಂತರ ಅಭಿಮಾನಿಗಳಿಂದಲೂ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ರೇವತಿ ಕೈಬರಹದಲ್ಲಿ ಬರೆದಿರುವ ಪತ್ರವನ್ನು ನಿಖಿಲ್ ಮತ್ತು ರೇವತಿ ಕೈ-ಕೈ ಹಿಡಿದುಕೊಂಡು ಓದುತ್ತಿರುವ ಫೋಟೋವನ್ನೂ ಇನ್ಸ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರು ಕೈ ಮೇಲೆ ಕೈಯಿಟ್ಟ ಪೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಇಬ್ಬರ ಎಂಗೇಜ್ ಮೆಂಟ್ ರಿಂಗ್ ಸಹ ರಿವೀಲ್ ಆಗಿದೆ.

 

 

“ನನ್ನ ರಾಜಕುಮಾರಿ, ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಸಮಯ ಕಳೆದಂತೆ ಸೌಂದರ್ಯ ಮಾಸಬಹುದು. ಆದರೆ ಒಳ್ಳೆಯ ಗುಣ ಸದಾ ನಮ್ಮ ಜೊತೆಯಲ್ಲಿಯೇ ಉಳಿಯುತ್ತದೆ. ನಾನು ನಿಮ್ಮ ವ್ಯಕ್ತಿತ್ವವನ್ನು ಪ್ರೀತಿಸುತ್ತೇನೆ. ನಿಮ್ಮೊಂದಿಗೆ ನಾನು ಕಳೆಯುತ್ತಿರುವ ಪ್ರತಿ ಕ್ಷಣವೂ ಅಮೂಲ್ಯವಾದುದ್ದು. ನಾನು ಪ್ರತಿ ಸೆಕೆಂಡ್ ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಭಾವಿ ಪತ್ನಿ ಬಗ್ಗೆ ನಿಖಿಲ್ ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

“ಸಾವು ನಮ್ಮನ್ನು ಬೇರ್ಪಡಿಸುವವರೆಗೂ ನಾವು ಕೈಯನ್ನು ಈ ರೀತಿ ಹಿಡಿದುಕೊಂಡೇ ಇರಬೇಕು ಎಂಬುದು ನನ್ನ ಇಚ್ಛೆ. ನನ್ನ ಮುಂದಿನ ಜನ್ಮದಲ್ಲೂ ನೀವೇ ನನ್ನ ಸಂಗಾತಿಯಾಗಬೇಕು ಎಂದು ಬಯಸುತ್ತೇನೆ. ನೀವು ನನ್ನ ರಾಜಕುಮಾರಿ. ನಾನು ನಿಮ್ಮನ್ನು ತುಂಬ ಪ್ರೀತಿಸುತ್ತೇನೆ. ಸಮಯ ಕಳೆದಂತೆ ಸೌಂದರ್ಯ ಮಾಸಬಹುದು. ಆದರೆ ಒಳ್ಳೆಯ ಗುಣ ಮಾಸದು. ನಿಮ್ಮ ವ್ಯಕ್ತಿತ್ವವನ್ನು ನಾನು ಸದಾ ಬಯಸುತ್ತೇನೆ. ನಾನು ಪ್ರತಿ ಸೆಕೆಂಡ್‌ ನಿಮ್ಮನ್ನು ಪ್ರೀತಿಸುತ್ತೇನೆ” ಎಂದಿದ್ದಾರೆ ನಿಖಿಲ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top