fbpx
ಸಮಾಚಾರ

ಈ ಕಾರಣಕ್ಕಾಗಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪ್ರತಾಪ್ ಸಿಂಹ!

ಕೊಡಗು-ಮೈಸೂರು ಸಂಸದ ಪ್ರತಾಪ್​ ಸಿಂಹ ಮತ್ತು ಮೈಸೂರಿನವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಆಗಾಗ ರಾಜಕೀಯವಾಗಿ ವಾಗ್ದಾಳಿಗಳು ನಡೆಯುತ್ತಲೇ ಇರುತ್ತವೆ. ಇಬ್ಬರನ್ನೂ ಬದ್ಧ ರಾಜಕೀಯ ವೈರಿಗಳು ಎಂದರೂ ತಪ್ಪಾಗಲಾರದು. ಆದರೆ ನಿನ್ನೆ ಸಂಸದ ಪ್ರತಾಪ್‌ ಸಿಂಹ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೇ ಅವರ ಸರ್ಕಾರದ ಸಾಧನೆಗಳನ್ನು ಕೊಂಡಾಡಿ ಸಿದ್ದರಾಮಯ್ಯನವರಿಗೆ ‘ಸಾಹೇಬರು’ ಅಂತ ಉಲ್ಲೇಖಿಸಿದ್ದಾರೆ.

 

 

ಮೈಸೂರಿನ ಜಯದೇವ ಆಸ್ಪತ್ರೆಯ ಕಟ್ಟಡ ಹಾಗೂ ವ್ಯವಸ್ಥೆಯ ಕುರಿತಾಗಿ ಟ್ವೀಟ್‌ ಮಾಡಿದ ಪ್ರತಾಪ್ ಸಿಂಹ ಅದಕ್ಕೆ ಕಾರಣಕರ್ತರಾದ ಸಿದ್ದರಾಮಯ್ಯ ಅವರಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿದ್ದರೂ ಸಿದ್ದರಾಮಯ್ಯ ಸರ್ಕಾರದ ಯೋಜನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಪ್ರತಾಪ್‌ ಸಿಂಹ ಬಗ್ಗೆ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.‌

ಟ್ವೀಟ್ ನಲ್ಲಿ ಇರುವುದು ಏನು?
“ಆತ್ಮೀಯರಾದ ಅಣ್ಣಯ್ಯ ನಾಯಕರು ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಜಯದೇವ ಆಸ್ಪತ್ರೆ ಸೇರಿದ್ದು,ಅವರನ್ನು ನೋಡಲು ಹೋಗಿದ್ದೆ. ಕಟ್ಟಡ ಮತ್ತು ವ್ಯವಸ್ಥೆ ಅದ್ಭುತವಾಗಿದೆ. 168 ಕೋಟಿ ಕೊಟ್ಟು ಅತ್ಯಾಧುನಿಕ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರಿಗೆ, ಉತ್ತಮ ಸೇವೆ ನೀಡುತ್ತಿರುವ ಡಾ. ಮಂಜುನಾಥ್ ಧನ್ಯವಾದಗಳು” ಎಂದು ಟ್ವೀಟ್‌ ಮಾಡಿರುವುದು ಗಮನಸೆಳೆದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top