fbpx
ಸಮಾಚಾರ

ಅಮಿತಾಬ್, ಮೋದಿ ಸೇರಿ ಘಟಾನುಘಟಿಗಳನ್ನು ಹಿಂದಿಕ್ಕಿ ದಾಖಲೆ ಬರೆದ ವಿರಾಟ್ ಕೊಹ್ಲಿ!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಹಿಂಬಾಲಿಸುವವರ ಸಂಖ್ಯೆ ಬರೋಬ್ಬರಿ 5 ಕೋಟಿ ದಾಟಿದೆ. ಆ ಮೂಲಕ ಕೊಹ್ಲಿ, ಇಷ್ಟು ಸಂಖ್ಯೆಯ ಫಾಲೋವರ್ಸ್‌ಗಳನ್ನು ಹೊಂದಿದ ಮೊದಲ ಭಾರತೀಯ ಎನಿಸಿದ್ದಾರೆ. ಈ ಮೂಲಕ ಕೊಹ್ಲಿ ಅವರು ಮೋದಿ, ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ, ಅಮಿತಾಬ್, ಸಲ್ಮಾನ್, ಶಾರುಖ್ ರಂತಹ ದಿಗ್ಗಜರನ್ನು ಹಿಂದಿಕ್ಕಿದ್ದಾರೆ!

 

 

ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಭಾರತೀಯರ ಪೈಕಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ಸೆಲೆಬ್ರಿಟಿಗಳನ್ನೇ ಹಿಂದಿಕಿದ್ದಾರೆ. ವಿರಾಟ್ ಕೊಹ್ಲಿ ಹಿಂಬಾಲಿಸುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 49.9 ದಶಲಕ್ಷ ಫಾಲೋವರ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ದೀಪಿಕಾ ಪಡುಕೋಣೆ 44.1 ದಶಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 34.5 ದಶಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯರು (ಮಿಲಿಯನ್ ನಲ್ಲಿ):
1. ವಿರಾಟ್ ಕೊಹ್ಲಿ: 50
2. ಪ್ರಿಯಾಂಕಾ ಚೋಪ್ರಾ: 49.88
3. ದೀಪಿಕಾ ಪಡುಕೋಣೆ: 44
4. ಆಲಿಯಾ ಭಟ್: 43
5. ಶ್ರದ್ದಾ ಕಪೂರ್: 40.3

6. ಜಾಕ್ಯೂಲಿನ್ ಫೆರ್ನಾಂಡೀಸ್: 37
7. ಅಕ್ಷಯ್ ಕುಮಾರ್: 36.4
8. ನರೇಂದ್ರ ಮೋದಿ: 34.4
9. ನೇಹಾ ಕಕ್ಕರ್: 32.6
10. ಅನುಷ್ಕಾ ಶರ್ಮಾ: 32.5

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top