fbpx
ಸಮಾಚಾರ

ಕಂಬಳ ವೀರ ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಕ್ಯಾಮರಾಗೆ ಪೋಸ್‍ ಕೊಟ್ಟ ಸಿಟಿ ರವಿ, ಹೆಬ್ಬಾರ್!

ಕಂಬಳ ಓಟದಲ್ಲಿ 100 ಮೀಟರ್ ಅಂತರವನ್ನು ಕೇವಲ 9.5 ಸೆಕೆಂಡ್​ಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದ ಶ್ರೀನಿವಾಸ ಗೌಡ ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅಲ್ಲದೆ, ಅಷ್ಟೇ ಖ್ಯಾತಿಯನ್ನೂ ಪಡೆದಿದ್ದರು. ಆದರೆ, ಹೀಗೆ ಖ್ಯಾತಿ ಪಡೆದ ಶ್ರೀನಿವಾಸ ಗೌಡ ಅವರನ್ನು ಸಚಿವ ಸಿ.ಟಿ. ರವಿ, ಶಿವರಾಮ್ ಹೆಬ್ಬಾರ್ ಪ್ರಚಾರಕ್ಕಾಗಿ ಬಳಸಿಕೊಂಡಿರುವ ಘಟನೆ ಇಂದು ವಿಧಾನಸೌಧದಲ್ಲಿ ದಾಖಲಾಗಿದೆ.

ಹೌದು, ಕಂಬಳ ವೀರ ಶ್ರೀನಿವಾಸ್‍ಗೌಡರನ್ನು ನೆನ್ನೆ ವಿಧಾನಸೌಧಕ್ಕೆ ಕರೆಸಿಕೊಂಡ ಸಿಎಂ ಯಡಿಯೂರಪ್ಪ ಸನ್ಮಾನ ಮಾಡಿದ್ದಾರೆ. ಈ ವೇಳೆ ಸನ್ಮಾನದ ಬಳಿಕ ಚೆಕ್ ವಿತರಿಸುವಂತೆ ಸೂಚಿಸಿ ಸಿಎಂ ಅಲ್ಲಿಂದ ನಿರ್ಗಮಿಸಿದರು. ಆದರೆ ಚೆಕ್ ಬರುವುದು ತಡವಾದ ಕಾರಣ ಶ್ರೀನಿವಾಸ್ ಗೌಡರಿಗೆ ಖಾಲಿ ಕವರ್ ನೀಡಿ ಸಚಿವರಾದ ಸಿಟಿ ರವಿ ಮತ್ತು ಶಿವರಾಮ್ ಹೆಬ್ಬಾರ್ ಪೋಸ್ ನೀಡಿದರು.

ಇದು ಖಾಲಿ ಕವರ್ ಅಂತಾ ಕೈ ಸನ್ನೆಯಲ್ಲೇ ಸಿಟಿ ರವಿ ತಿಳಿಸುವ ಪ್ರಯತ್ನ ಮಾಡಿದರು. ಕಾರ್ಯಕ್ರಮ ಮುಗಿದ ಅರ್ಧ ಗಂಟೆಯ ನಂತರ ಕಾರ್ಮಿಕ ಇಲಾಖೆ ಅಧಿಕಾರಿಗಳು ಶ್ರೀನಿವಾಸ್ ಗೌಡರಿಗೆ 3 ಲಕ್ಷ ರೂಪಾಯಿಯ ಚೆಕ್ ವಿತರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top