fbpx
ಸಮಾಚಾರ

ಉಗ್ರ ಕಸಬ್​ನನ್ನು ‘ಹಿಂದು’ ಎಂದು ಬಣ್ಣಿಸಲು ನಡೆದಿತ್ತು ಪ್ಲಾನ್​; ಸ್ಪೋಟಕ ಸತ್ಯಗಳನ್ನ ಬಿಚ್ಚಿಟ್ಟ ಮಾಜಿ ಕಮೀಷನರ್!

ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ 2008ರ ನವೆಂಬರ್‌ 26ರ ಮುಂಬಯಿ ದಾಳಿ ಪ್ರಕರಣದಲ್ಲಿ ಹಿಂದೂಗಳನ್ನೇ ಸಿಕ್ಕಿ ಹಾಕಿಸಲು ಪಾಕಿಸ್ಥಾನದ ಐಎಸ್‌ಐ ಮತ್ತು ಲಷ್ಕರ್‌- ಎ-ತಯ್ಯಬಾ ವ್ಯವಸ್ಥಿತವಾಗಿ ಸಂಚು ರೂಪಿಸಿತ್ತು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಹೇಳಿದ್ದಾರೆ. ಅವರು ೨೦೦೮ರ ಮುಂಬೈ ದಾಳಿ ತನಿಖೆಯ ಅಂಶಗಳನ್ನು ಬಹಿರಂಗಪಡಿಸಿದ್ದು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ತಾನು ನಡೆಸಿದ ತನಿಖೆಯ ಬಗ್ಗೆ ಆತ್ಮಕಥೆ ‘ಲೆಟ್ ಮಿ ಸೇ ಇಟ್ ನೌ’ ನಲ್ಲಿ ಬರೆದುಕೊಂಡಿದ್ದಾರೆ.

ಆತನ ಬಳಿಯಿದ್ದ ನಕಲಿ ಗುರುತಿನ ಚೀಟಿಯಲ್ಲಿ ‘ಸಮೀರ್‌ ದಿನೇಶ್‌ ಚೌಧರಿ’ ಎಂಬ ಹೆಸರಿತ್ತು. ಮೂಲತಃ ಬೆಂಗಳೂರಿನ, ಹೈದರಬಾದ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿ ಎಂಬ ವಿವರಗಳನ್ನು ಆತ ಹೊಂದಿದ್ದ ಎಂದು ರಾಕೇಶ್‌ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಒಂದು ವೇಳೆ ಕಸಬ್‌ ಜೀವಂತವಾಗಿ ಸಿಕ್ಕಿರದಿದ್ದರೆ, ಆತ ಹಿಂದುಯೇತರ ಎಂದು ಸಾಬೀತುಪಡಿಸುವುದು ತೀರಾ ಕಷ್ಟವಿತ್ತು. ಜತೆಗೆ ಆತನ ಪಾಕಿಸ್ತಾನದ ಫರೀದ್‌ಕೋಟ್‌ ಮೂಲವನ್ನು ಪತ್ತೆ ಮಾಡುವುದೂ ಅಸಾಧ್ಯವಾಗಿತ್ತು ಎಂದು ಹೇಳಿದ್ದಾರೆ.

ಕೈನಲ್ಲಿ ಕೆಂಪು ದಾರ:
ಮುಂಬೈ ದಾಳಿಕೋರ ಅಜ್ಮಲ್ ಕಸಬ್ ನಲ್ಲು ಹಿಂದೂ ಉಗ್ರನಂತೆ ಬಿಂಬಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಮುಸ್ಲಿಂ ಉಗ್ರನಾಗಿದ್ದರೂ ಕೂಡಾ ಆತನು ಮೊಣಕೈಗೆ ಕೆಂಪುದಾರವನ್ನು ಕಟ್ಟಿಕೊಂಡಿದ್ದನು. ಈ ಕೆಂಪುದಾರವು ಹಿಂದೂ ಧರ್ಮದ ಪ್ರತೀಕ ಎಂದು ನಂಬಲಾಗಿದೆ. ಹೀಗಾಗಿಯೇ ಕಸಬ್ ನ ಮೊಣಕೈಯಲ್ಲಿ ದಾರವನ್ನು ಕಟ್ಟಿಕೊಂಡಿದ್ದ ಎಂದು ತಿಳಿದು ಬಂದಿದೆ.

ವಿಫಲ ಸಂಚು:
ಸಂಚಿನ ಪ್ರಕಾರ, ದಾಳಿಯಾದ ಮೇಲೆ ಈ ಉಗ್ರರ ಹಿನ್ನೆಲೆ ಪರೀಕ್ಷಿಸಲಾಗುತ್ತದೆ. ಆಗ ಇವರ ಹಿಂದೂ ಗುರುತು ಸಿಕ್ಕಿ, ಎಲ್ಲ ಸುದ್ದಿವಾಹಿನಿಗಳು, ಪ್ರಮುಖ ಪತ್ರಕರ್ತರು ಬೆಂಗಳೂರಿನ ವಿಳಾಸಕ್ಕೆ ಹೋಗಿ ಸಂದರ್ಶನ ಮಾಡುತ್ತಾರೆ. ಆಗ ಎಲ್ಲೆಡೆ ಹಿಂದೂ ಉಗ್ರರಿಂದ ಮುಂಬಯಿ ದಾಳಿ ಎಂಬ ಸುದ್ದಿ ಬರುತ್ತದೆ ಎಂದೇ ಪಾಕಿಸ್ಥಾನದ ಐಎಸ್‌ಐ ಮತ್ತು ಎಲ್‌ಇಟಿ ಅಂದು ಕೊಂಡಿದ್ದವು. ಆದರೆ, ಆಗಿದ್ದೇ ಬೇರೆ. ಅಜ್ಮಲ್‌ ಕಸಬ್‌ನನ್ನು ಜೀವಂತವಾಗಿ ಹಿಡಿದ ಮೇಲೆ ಎಲ್ಲವೂ ಬದಲಾಯಿತು. ಆತ ಬೆಂಗಳೂರು ಮೂಲದವನಲ್ಲ, ಬದಲಾಗಿ ಪಾಕ್‌ ಮೂಲದವನು ಎಂಬುದು ಗೊತ್ತಾಯಿತು.

“ಕಸಬ್‌ ಪ್ರಕಾರ, ಭಾರತದಲ್ಲಿ ಮಸೀದಿಗಳಿಗೆ ಜಾಗವೇ ಇಲ್ಲ. ಇದ್ದ ಎಲ್ಲ ಮಸೀದಿಗಳಿಗೆ ಬೀಗ ಹಾಕಲಾಗಿದೆ. ನಮಾಜ್‌ಗೆ ಅವಕಾಶವೇ ಇಲ್ಲ. ಈ ರೀತಿ ತರಬೇತುದಾರರು ಆತನ ತಲೆಗೆ ತುಂಬಿಸಿ ಕಳುಹಿಸಿದ್ದರು. ಕಸಬ್​ ಹಲವಷ್ಟು ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡಿದ್ದ. ಆದರೆ, ಆತ ಜೈಲಿನಲ್ಲಿದ್ದಾಗ ದಿನಕ್ಕೆ 5 ಬಾರಿ ಆಜಾನ್​​ ಕೇಳುತ್ತಿತ್ತು. ಇದಾದ ನಂತರ ಆತನಿಗೆ ತನ್ನ ಕಲ್ಪನೆಗಳು ತಪ್ಪು ಎನ್ನುವುದು ಗೊತ್ತಾಗಿತ್ತು. ಅಲ್ಲದೆ, ಆತನನ್ನು ಹತ್ತಿರದ ಮಸೀದಿಗೆ ಕರೆದುಕೊಂಡು ಹೋಗಿ ನಮಾಜ್​ ಮಾಡುತ್ತಿರುವವರನ್ನು ತೋರಿಸಲಾಗಿತ್ತು. ಈ ವೇಳೆ ಕಸಬ್​ ದಿಗ್ಭ್ರಮೆ ಗೊಂಡಿದ್ದ,” ಎಂದು ಮರಿಯಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಇಷ್ಟಲ್ಲದೆ, ದಾಳಿ ನಂತರ ಸೆರೆಸಿಕ್ಕ ಉಗ್ರ ಕಸಬ್‌ನನ್ನು ಪೊಲೀಸ್‌ ವಶದಲ್ಲಿಯೇ ಹತ್ಯೆಗೈಯಲು ಐಎಸ್‌ಐ ಮತ್ತು ಲಷ್ಕರೆ ತೊಯ್ಬಾ ಸಂಘಟನೆಗಳು ಹರಸಾಹಸಪಟ್ಟಿದ್ದವು. ಭೂಗತ ಪಾತಕಿ ದಾವೂದ್‌ ಗ್ಯಾಂಗ್‌ಗೆ ಕೂಡ ಕಸಬ್‌ ಹತ್ಯೆಗೆ ಸುಪಾರಿ ನೀಡಿಲಾಗಿತ್ತು ಎಂದು ಮರಿಯಾ ಸ್ಫೋಟಕ ವಿಚಾರಗಳನ್ನು ಬಯಲು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top