fbpx
ಸಮಾಚಾರ

ಖ್ಯಾತ ನಟ ಶ್ರೀಕಾಂತ್ ಅವರ ತಂದೆ ನಿಧನ

ಖ್ಯಾತ ಟಾಲಿವುಡ್ ನಟ ಶ್ರೀಕಾಂತ್ ತಂದೆ ಪರಮೇಶ್ವರ ರಾವ್ ವಿಧಿವಶರಾಗಿದ್ದಾರೆ. ಪರಮೇಶ್ವರ ರಾವ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಫೆಬ್ರವರಿ 16ರಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಹಲವು ವರ್ಷಗಳಿಂದ ಶ್ರೀಕಾಂತ್ ಅವರ ತಂದೆಗೆ ಉಸಿರಾಟ ತೊಂದರೆ ಕಾಡುತ್ತಿತ್ತು. ನಾಲ್ಕೈದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಹೈದರಾಬಾದ್‌ನ ಜೂಬ್ಲಿ ಹಿಲ್ಸ್‌ನಲ್ಲಿ ಮೃತರ ಅಂತ್ಯಕ್ರಿಯೆಗಳು ಸೋಮಾವಾರ ನೆರವೇರಿದವು.

ಮೂಲತಃ ಕರ್ನಾಟಕದವರಾಗಿದ್ದ ಪರಮೇಶ್ವರ್ ರಾವ್ ಕರ್ನಾಟಕದ ಗಂಗಾವತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದ್ದರು. ಶ್ರೀಕಾಂತ್ ಅವರ ತಂದೆ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ. ಚಿರಂಜೀವಿ, ಅಲ್ಲು ಅರವಿಂದ್ ಸೇರಿದಂತೆ ಹಲವಾರು ತಾರೆಗಳು ಪರಮೇಶ್ವರ ರಾವ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು ಶ್ರೀಕಾಂತ್ ಮನೆಗೂ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top