fbpx
ಸಮಾಚಾರ

ಜಗ್ಗೇಶ್ ಹೇಳಿದ ಗಂಟೆಯಲ್ಲೇ ಕಿಲ್ಲರ್ ವೆಂಕಟೇಶ್​ಗೆ 1 ಲಕ್ಷ ನೀಡಿದ ದರ್ಶನ್!

ಜಗ್ಗೇಶ್‌ ತಮ್ಮ ಬಹುಕಾಲದ ಗೆಳೆಯ ವೆಂಕಟೇಶ್‌ ಯಕೃತ್ತಿನ ಸಮಸ್ಯೆಯಿಂದ ಆಸ್ಪತ್ರೆ ಸೇರಿರುವುದನ್ನು ತಿಳಿದ ಜಗ್ಗೇಶ್‌ ಅವರನ್ನು ಭೇಟಿ ಮಾಡಿ ಈಗ ಗೆಳೆಯನನ್ನು ಅನಾರೋಗ್ಯದಿಂದ ಪಾರು ಮಾಡಲು ನೆರವಾಗುತ್ತಿದ್ದಾರೆ. ವೆಂಕಟೇಶ್‌ ಸಮಸ್ಯೆಯಲ್ಲಿರುವುದನ್ನು ಅವರು ದರ್ಶನ್‌ಗೆ ತಿಳಿಸಿದ್ದಾರೆ. ತಕ್ಷಣ ದರ್ಶನ್‌ ಒಂದು ಲಕ್ಷ ರೂ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಬಗ್ಗೆ ಜಗ್ಗೇಶ್ ಅವರು ದರ್ಶನ್ ಅವರಿಗೆ ತಿಳಿಸಿದ್ದಾರೆ. ಜಗ್ಗೇಶ್ ಫೋನ್‍ಗೆ ತಕ್ಷಣ ಪ್ರತಿಕ್ರಿಯಿಸಿದ ದರ್ಶನ್, ಒಂದು ಲಕ್ಷ ಹಣ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

 

 

“ಕಿಲ್ಲರ್ ವೆಂಕಟೇಶ್ ವಿಷಯವಾಗಿ ನಾನು ಕರೆ ಮಾಡಿದ 1 ಗಂಟೆಯಲ್ಲಿ ಅವನ ಚಿಕಿತ್ಸೆಗೆ 1ಲಕ್ಷ ರೂ ಕಳಿಸಿದ ಕಲಾಬಂಧು. ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು. ನಿನ್ನ ಶ್ರೇಷ್ಠಗುಣ ನನ್ನ ಹೃದಯದಲ್ಲಿ ಅಚ್ಚಾಯಿತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ. dasadarshan god bless” ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಅಂದಹಾಗೆ 250ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಕಿಲ್ಲರ್​ ವೆಂಕಟೇಶ್​ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ . ಸದ್ಯ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಜಗ್ಗೇಶ್​ಗೆ ಕರೆ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಒಂದು ಹೊತ್ತಿನ ಅನ್ನಕ್ಕೂ ಹಣವಿಲ್ಲದ ಪರದಾಡುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರಂತೆ. ಈ ಬೆನ್ನಲ್ಲೇ ನಟ ಜಗ್ಗೇಶ್​​ ಸೇರಿದಂತೆ ಹಲವರು ಇವರ ಸಹಾಯಕ್ಕೆ ನಿಂತಿದ್ಧಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top