fbpx
ಸಮಾಚಾರ

ನಟಿ ಆಶಿಕಾ ರನ್ನು ಎಳೆದಾಡಿ ಬಲವಂತವಾಗಿ ಕಿಸ್ ಮಾಡಿದ ವ್ಯಕ್ತಿ: ವಿಡಿಯೋ ವೈರಲ್, ಅಸಲಿಗೆ ಆಗಿದ್ದೇನು?

ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ಚುಟು ಚುಟು ನಟಿ ಆಶಿಕಾ ರಂಗನಾಥ್ ಅವರನ್ನು ವ್ಯಕ್ತಿಯೊರ್ವ ಎಳೆದಾಡಿ ಮುತ್ತು ಕೊಟ್ಟಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿದ್ದಾರೆ!

ಅಸಲಿ ವಿಷಯ ಏನೆಂದರೆ, ಅದು ನಿಜವಾಗಿ ನಡೆದ ಘಟನೆಯೇ ಅಲ್ಲ! ಪ್ರಸ್ತುತ ಆಶಿಕಾ ರಂಗನಾಥ್‌ ನಟಿಸುತ್ತಿರುವ ‘ರೇಮೋ’ ಸಿನಿಮಾದ ಶೂಟಿಂಗ್‌. ಆದರೆ ವಿಡಿಯೋ ವೈರಲ್‌ ಆಗಿದ್ದು ಮಾತ್ರ ವಿಪರ್ಯಾಸ. ಚಿತ್ರದಲ್ಲಿ ಬರುವ ಸನ್ನಿವೇಶದಲ್ಲಿ ಕಿಡಿಗೇಡಿಯೊಬ್ಬ ನಾಯಕಿ ಕೆನ್ನೆಗೆ ಬಲವಂತವಾಗಿ ಕಿಸ್‌ ಮಾಡುತ್ತಾನೆ. ಇದರ ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ಇದ್ದ ಯಾರೋ ಒಬ್ಬರು ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ. ಅದರ ಹಿಂದಿನ ಅಸಲಿ ಸತ್ಯ ಏನು ಎಂಬುದು ಗೊತ್ತಾಗುವ ಮೊದಲೇ ಆ ವಿಡಿಯೋ ವೈರಲ್‌ ಆಗಿದೆ.

 

 

“ಈ ವಿಡಿಯೋ ‘ರೇಮೊ’ ಸಿನಿಮಾದ್ದು. ಇದರಲ್ಲಿ ನಟಿಗೆ ಮುತ್ತಿಟ್ಟು ಪರಾರಿಯಾಗುವ ಕಲಾವಿದ ಕಿರಣ್​. ಈ ವಿಡಿಯೋ ಕುರಿತಾಗಿ ತಪ್ಪಾಗಿ ಸುದ್ದಿ ಹರಡುತ್ತಿದ್ದು, ಕಿರಣ್​ ಎಲ್ಲೇ ಕಂಡರೂ ಅವರನ್ನು ಜನ ಬೆದರಿಸುತ್ತಿದ್ದಾರಂತೆ. ಸಿನಿಮಾ ಚಿತ್ರೀಕರಣ ನಡೆಯುವಾಗ ಕಿರಿಯ ಕಲಾವಿದರೊಬ್ಬರು ಇದನ್ನು ಮೊಬೈಲ್​ನಲ್ಲಿ ಶೂಟ್​ ಮಾಡಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.”​ಎಂದು ರೆಮೋ ಸಿನಿಮಾದ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ! ಇನ್ನು ಈ ಕುರಿತಾಗಿ ಆಶಿಕಾ ರಂಗನಾಥ್ ಸಹ ಸ್ಪಷ್ಟನೆ ನೀಡಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆಂದು ಪವನ್​ ತಾವು ಮಾಡಿರುವ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top