fbpx
ಸಮಾಚಾರ

ಅಲ್ಪಸಂಖ್ಯಾತ ಕರಕುಶಲ ಮೇಲಕ್ಕೆ ಆಕಸ್ಮಿಕ ಭೇಟಿ ನೀಡಿ ಆಹಾರ ಸವಿದು ಬಿಲ್​ ಪಾವತಿಸಿ ಸಮಸ್ಯೆ ಆಲಿಸಿದ ಪ್ರಧಾನಿ ಮೋದಿ!

ನೆನ್ನೆ ದೆಹಲಿಯ ರಾಜಪಥ್​ನಲ್ಲಿ ಅಲ್ಪಸಂಖ್ಯಾತ ಕರಕುಶಲ ಕಾರ್ಮಿಕರನ್ನು ಉತ್ತೇಜಿಸಲು ಹಾಗೂ ಅವರ ಉತ್ಪನ್ನ ಮಾರಾಟ ಹೆಚ್ಚಿಸುವ ಸಲುವಾಗಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು.

ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಮತ್ತು ಜೈನ ಸಮುದಾಯಗಳ ಕುಶಲ ಕರ್ಮಿಗಳ ಉತ್ಪನ್ನಗಳ ಮಾರಾಟಕ್ಕಾಗಿ ಹುನರ್ ಹಾಥ್ ಆಯೋಜಿಸಲಾಗಿತ್ತು. ಕುಶಲಕರ್ಮಿಗಳು ಮತ್ತು ಪಾಕಶಾಲೆಯ ತಜ್ಞರ ಸ್ಟಾಲ್ ಗಳಿಗೆ ಭೇಟಿ ನೀಡಿ ಪ್ರಧಾನಿ ಮೋದಿ ಮಾತನಾಡಿದರು. ಅಲ್ಲದೆ ಕರಕುಶಲಗಳ ಕುಶಲತೆಗೆ ತಲೆ ಬಾಗಿದರು.

 

 

ಕೇಂದ್ರ ಸಂಪುಟ ಸಭೆ ಮುಗಿದ ಬಳಿಕ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ “ಹುನಾರ್​ ಹಾತ್​”ಗೆ ತೆರಳಿದ ಪ್ರಧಾನಿ ಮೋದಿ ಸುಮಾರು 50 ನಿಮಿಷಗಳ ಸಮಯ ಕಳೆದು ಕರಕುಶಲಗಾರರೊಂದಿಗೆ ಸಂವಹನ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಮುಖ್ತಾರ್​ ಅಬ್ಬಾಸ್​ ನಖ್ವಿ ಕೂಡ ಉಪಸ್ಥಿತರಿದ್ದರು.

ಪ್ರಧಾನಿ ಭೇಟಿ ಸ್ವತಃ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳಿಗೆ ಸರ್ಪ್ರೈಸ್​ ನೀಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೇಟಿ ವೇಳೆ ಲಿಟ್ಟಿ ಛೋಖಾ ಸವಿದ ಪ್ರಧಾನಿ ಮೋದಿ, 120 ರೂ. ಪಾವತಿಸಿದರು. ಅಲ್ಲದೆ, ಸಚಿವ ಅಬ್ಬಾಸ್​ ನಖ್ವಿಯೊಂದಿಗೆ ಚಹಾ ಸವಿದು 40 ರೂ. ನೀಡಿದರು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top