fbpx
ಸಮಾಚಾರ

‘ಕಿಶೋರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಅಗಲಿದ ನಟಿಗೆ ಶಾರುಖ್ ಖಾನ್ ಸಂತಾಪ!

ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಮೊನ್ನೆ ( ಫೆಬ್ರವರಿ18) ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದರು.

 

 

ಮೂಲತಃ ರಂಗಭೂಮಿ ಪ್ರತಿಭೆ ಆಗಿದ್ದ ಅವರು, ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಅಷ್ಟೇ ಅಲ್ಲದೆ, ಬಾಲಿವುಡ್‌ ‘ಸ್ವದೇಸ್‌’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಅದರರಲ್ಲಿ ಶಾರುಖ್ ಖಾನ್‌ ಹೀರೋ. ಇದೀಗ ಕಿಶೋರಿ ಅವರ ಸಾವಿನ ಸುದ್ದಿ ಕೇಳಿ ಆಘಾತಗೊಂಡಿರುವ ನಟ ಶಾರುಖ್‌, ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ಶಾರುಖ್, ಕಿಶೋರಿ ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಅವರನ್ನ ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನಾನು ಧುಮಪಾನ ಮಾಡುತ್ತಿದ್ದನ್ನ ಖಂಡಿಸಿ ಬುದ್ಧಿ ಹೇಳಿದ್ದರು. ಅಲ್ಲಾ ಅವರನ್ನ ಚೆನ್ನಾಗಿ ನೋಡಿಕೊಳ್ಳಲಿ” ಎಂದು ಭಾವುಕವಾಗಿ ಶಾರುಖ್ ಖಾನ್ ಬರೆದುಕೊಂಡಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top