fbpx
ಸಮಾಚಾರ

ಪಾಕ್ ಪರ ಘೋಷಣೆ: “ಅಮೂಲ್ಯಗೆ ಹಿಂದೆ ಮಾವೋವಾದಿಗಳ ಜೊತೆಗೆ ನಂಟಿತ್ತು” ಬಿಎಸ್‌ವೈ ಹೇಳಿಕೆ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿಗೆ ನಕ್ಸಲರ ಜತೆ ಸಂಬಂಧವಿರುವುದು ಈ ಹಿಂದೆ ಸಾಬೀತಾಗಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

‘ಅಮೂಲ್ಯ ಎನ್ನುವ ಹುಡುಗಿ ಪಾಕ್ ಪರ ವಹಿಸಿ ಮಾತನಾಡಿರುವ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ರ ಶಿಕ್ಷೆ ವಿಧಿಸುತ್ತೇವೆ. ಅವಾಗಲೇ ಇಂತಹ ಘಟನೆಗಳು ಮರುಕಳಿಸುವುದಿಲ್ಲ! ಅವಳ ಕೈ ಕಾಲು ಮುರಿಯಿರಿ ಎಂದು ಅವರ ತಂದೆಯೇ ಹೇಳಿದ್ದಾರೆ. ಆ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ. ಈ ಬಗ್ಗೆ ನಮ್ಮ ಪೊಲೀಸ್ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ’ ಎಂದು ತಿಳಿದು ಬಂದಿದೆ ಎಂದರು.

ಅಮೂಲ್ಯಗೆ ಜಾಮೀನು ಸಿಗಬಾರದು. ಅವಳ ಕೈ ಕಾಲು ಮುರಿಯಿರಿ ಎಂದು ಅವರ ತಂದೆಯೇ ಹೇಳಿದ್ದಾರೆ. ಆ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ. ಈ ಬಗ್ಗೆ ನಮ್ಮ ಪೊಲೀಸ್ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ’ ಎಂದು ತಿಳಿದು ಬಂದಿದೆ ಎಂದರು.

ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಈ ರೀತಿಯ ಘೋಷಣೆಗಳನ್ನು ಕೂಗಲಾಗಿದೆ. ಇದಕ್ಕೆಲ್ಲಾ ಯಾರು ಬೆಂಬಲ ನೀಡುತ್ತಾರೆ ಎಂಬವುದು ಗೊತ್ತಾಗಲಿದೆ. ಇವಳ ಹಿಂದೆ ಇರುವ ಪ್ರೇರಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top