fbpx
ಸಮಾಚಾರ

ಸಾವು ಬದುಕಿನ ನಡುವೆ ಹೋರಾಡುತ್ತಿರುವ ನಟ ಕಿಲ್ಲರ್ ವೆಂಕಟೇಶ್‍ಗೆ ಸೃಜನ್‍ ಲೋಕೇಶ್ ಸಹಾಯ ಹಸ್ತ!

ನಟ ದರ್ಶನ್ ನಂತರ ನಟ ಸೃಜನ್ ಅವರು ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ನಟ ಸೃಜನ್ ಕಿಲ್ಲರ್ ವೆಂಕಟೇಶ್ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಿದ್ದಾರೆ. ಸೃಜನ್ ಲೋಕೇಶ್ ಅವರು ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗಾಗಿ 50 ಸಾವಿರ ರೂ. ನೀಡಿದ್ದಾರೆ.

ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿ, “ಧನ್ಯವಾದಗಳು ಸೃಜನ್ ಲೋಕೇಶ್, ಕಿಲ್ಲರ್ ವೆಂಕಟೇಶ್ ಕಲಾಬಂಧುವಿನ ಕಷ್ಟಕ್ಕೆ ಸ್ಪಂದಿಸಿದಕ್ಕೆ. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ” ಎಂದು ಟ್ವೀಟ್ ಮಾಡಿದ್ದಾರೆ.

 

 

1 ಲಕ್ಷ ನೀಡಿದ್ದ ದರ್ಶನ್
ನಟ ದರ್ಶನ್ ಸಹ ನಿನ್ನೆ ಕಿಲ್ಲರ್ ವೆಂಕಟೇಶ್ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಒಂದು ಲಕ್ಷ ಹಣವನ್ನು ನೀಡಿದ್ದಾರೆ. ಜಗ್ಗೇಶ್ ಕರೆ ಮಾಡಿ ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಬಗ್ಗೆ ಹೇಳಿದ ಒಂದು ಗಂಟೆಯ ಒಳಗೆ ದರ್ಶನ್ ಹಣ ನೀಡಿದ್ದಾರೆ.

ಅಂದಹಾಗೆ 250ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಕಿಲ್ಲರ್​ ವೆಂಕಟೇಶ್​ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ . ಸದ್ಯ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಜಗ್ಗೇಶ್​ಗೆ ಕರೆ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಒಂದು ಹೊತ್ತಿನ ಅನ್ನಕ್ಕೂ ಹಣವಿಲ್ಲದ ಪರದಾಡುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರಂತೆ. ಈ ಬೆನ್ನಲ್ಲೇ ನಟ ಜಗ್ಗೇಶ್​​ ಸೇರಿದಂತೆ ಹಲವರು ಇವರ ಸಹಾಯಕ್ಕೆ ನಿಂತಿದ್ಧಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top