fbpx
ಸಮಾಚಾರ

ನೆರೆ ಪರಿಹಾರ ಸಿಗದ್ದಕ್ಕೆ ಬೇಸತ್ತು ಅಂಗವಿಕಲೆ ಆತ್ಮಹತ್ಯೆಗೆ ಶರಣು!

ಪ್ರವಾಹ ಸಂದರ್ಭ ಬಿದ್ದ ಮನೆಗೆ ಸೂಕ್ತ ಪರಿಹಾರ ಸಿಗಲಿಲ್ಲಎಂದು ಮನನೊಂದ ವಿಶೇಷಚೇತನ ಮಹಿಳೆಯೊಬ್ಬರು ನಗರದ ಕೆಸಿ ಪಾರ್ಕ್ನಲ್ಲಿವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಮಂಜುಳಾ ಕಲ್ಲೂರ್ ಆತ್ಮಹತ್ಯೆಗೆ ಶರಣಾದ ಯುವತಿ. ಧಾರವಾಡದ ಕಿತ್ತೂರ ರಾಣಿ ಚನ್ನಮ್ಮ ಪಾರ್ಕಿನಲ್ಲಿ ವಿಷ ಕುಡಿದು ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಧಾರವಾಡ ತಾಲೂಕಿನ ದುಬ್ಬನಮರಡಿ ಗ್ರಾಮದ ನಿವಾಸಿಯಾದ ಮಂಜುಳಾ ವಾಸವಿದ್ದ ಮನೆ ನಾಲ್ಕು ತಿಂಗಳ ಸುರಿದ ಮಳೆಗೆ ಬಿದ್ದಿತ್ತು. ಪರಿಹಾರ ನೀಡುವಂತೆ ಮಂಜುಳಾ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ಜಿಲ್ಲಾಡಳಿತ 50 ಸಾವಿರ ರೂ. ಪರಿಹಾರ ನೀಡಿ ಕೈತೊಳೆದುಕೊಂಡಿತ್ತು.

ಆದರೆ, ತಮ್ಮ ಮನೆ ಸಂಪೂರ್ಣವಾಗಿ ಬಿದ್ದಿದೆ ಎಂದು ಹೇಳಿದ್ದ ಮಂಜುಳಾ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಲೇ ಇದ್ದರು. ಜ. 13ಕ್ಕೆ ಪುನರ್‌ ಪರಿಶೀಲನೆ ನಡೆಸಿದ ಸ್ಥಳೀಯ ಅಧಿಕಾರಿಗಳು ಇವರಿಗೆ ನೀಡಿದ ಪರಿಹಾರ ಯೋಗ್ಯವಾಗಿದೆ ಎಂದು ವರದಿ ಕೂಡ ನೀಡಿದ್ದರು. ಹೀಗಾಗಿ ತಮ್ಮ ಮನೆಗೆ 5ಇಲ್ಲವೇ 3ಲಕ್ಷ ರೂ. ಪರಿಹಾರ ಸಿಗಬೇಕಿತ್ತು ಎಂದು ಮನನೊಂದ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ

ಇವರ ಸಹೋದರಿ ಹಾಗೂ ಸಹೋದರ ಸಹ ಇವರಂತೆ ಕುಬ್ಜರು. ಇವರ ತಂದೆಯೂ ದೇಹದ ಬಲಭಾಗ ಸ್ವಾಧೀನ ಕಳೆದುಕೊಂಡಿದ್ದಾರೆ. ಹೀಗಾಗಿ ಮನೆಗೆ ಹೆಚ್ಚಿನ ಪರಿಹಾರ ಬರಬಹುದು, ಅದರಿಂದ ಬೀದಿಗೆ ಬಂದಿರುವ ತಮ್ಮ ಕುಟುಂಬಕ್ಕೆ ಕನಿಷ್ಠ ನೆರಳಾದರೂ ಲಭಿಸೀತು ಎಂದು ಮಂಜುಳಾ ಜಿಲ್ಲಾಧಿಕಾರಿ ಕಚೇರಿಗೆ ಕೆಲ ದಿನಗಳಿಂದ ಅಲೆದಾಟ ನಡೆಸಿದ್ದರು. ಆದರೆ, ಪರಿಹಾರದ ವಿಚಾರದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ, ಉದಾಸೀನತೆಗೆ ಬೇಸತ್ತು ಕೊನೆಗೆ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top