fbpx
ಸಮಾಚಾರ

336 ದಿನ ವ್ಯಾಲಿಡಿಟಿ, ಪ್ರತಿ ದಿನ 1.5GB ಡೇಟಾ ಉಚಿತ: ಜಿಯೋ ವಾರ್ಷಿಕ ಪ್ಲಾನ್​ ಬಿಡುಗಡೆ!

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಗ್ರಾಹಕರನ್ನು ಸೃಷ್ಟಿಸಿಕೊಂಡಿರುವ ರಿಲಯನ್ಸ್ ತನ್ನ ಗ್ರಾಹಕರಿಗೆ ಹಿಂದೆಂದೂ ನೀಡದ ಆಫರ್ ಅನ್ನು ನೀಡಿದೆ.ಜಿಯೋ ಸಿಮ್ ಬಂದಾಗಿನಿಂದಲೂ ತತ್ತರಿಸಿ ಹೋಗಿದ್ದ ಉಳಿದ ಟೆಲಿಕಾಂ ಸಂಸ್ಥೆಗಳು ಜಿಯೋಗೆ ಸೆಡ್ಡುಹೊಡೆಯಲು ಒಂದರ ಮೇಲೆಂದು ಆಫರ್ ಗಳನ್ನೂ ನೀಡುತ್ತಾ ಬಂದಿದ್ದರೂ ತನ್ನ ಪ್ರಭಾವವನ್ನು ಕುಗ್ಗಿಸಿಕೊಳ್ಳದ ಜಿಯೋ ಭಾರಿ ಆಫರ್ ನೀಡಿದೆ.

 

 

ವಾರ್ಷಿಕ ಪ್ಲಾನ್:
ರಿಲಯನ್ಸ್ ಜಿಯೋ ಈಗ 336 ದಿನ ವ್ಯಾಲಿಡಿಟಿ ಹೊಂದಿರುವ ಪ್ರತಿ ದಿನ 1.5 ಜಿಬಿ ಡೇಟಾ ಪ್ಯಾಕ್ ಇರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಡೇಟಾ ಪ್ಯಾಕ್ ಸಿಗಬೇಕಾದರೆ 2,121 ರೂ. ರಿಚಾರ್ಜ್ ಮಾಡಬೇಕು. ಪ್ರತಿದಿನ 1.5 ಜಿಬಿ ಡೇಟಾ ಜೊತೆಗೆ ಜಿಯೋದಿಂದ ಜಿಯೋ., ಲ್ಯಾಂಡ್ ಲೈನಿಗೆ ಕಾಲ್ ಉಚಿತವಾಗಿರಲಿದೆ ಎಂದು ಜಿಯೋ ತಿಳಿಸಿದೆ.

ಈ ಪ್ಲಾನ್ ಅಳವಡಿಸಿಕೊಂಡರೆ ಜಿಯೋದಿಂದ ಜಿಯೋ ನೆಟ್​ವರ್ಕ್​ಗೆ ಅನಿಯಮಿತ ಕರೆಗಳ ಸೌಲಭ್ಯ, ಜಿಯೋದಿಂದ ಬೇರೆ ನೆಟ್​​​​ ವರ್ಕ್​​ಗಳಿಗೆ 12000 ನಿಮಿಷಗಳ ಉಚಿತ ಕರೆ ಸೌಲಭ್ಯ ಒದಗಿಸುತ್ತಿದೆ. ಇದರ ಜೊತೆಗೆ ದಿನಕ್ಕೆ 100 ಉಚಿತ ಎಸ್ಎಮ್ಎಸ್ ಮತ್ತು ಜಿಯೋ ಆ್ಯಪ್ ಚಂದಾದಾರಿಕೆ ನೀಡುತ್ತಿದೆ. ಮಾತ್ರವಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ ಉಚಿತವಾಗಿ ಸಿಗಲಿದೆ. ಗ್ರಾಹಕರು ಇಷ್ಟೆಲ್ಲಾ ಪ್ರಯೋಜನ ಪಡೆಯಬೇಕಾದರೆ ಜಿಯೋ ಪರಿಚಯಿಸಿರುವ ವಾರ್ಷಿಕ ಪ್ಲಾನ್ 2,121 ರೂ. ರಿಚಾರ್ಜ್ ಮಾಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top