fbpx
ಸಮಾಚಾರ

ಕಳ್ಳತನ ಮಾಡಿ ಜೈಲು ಪಾಲಾದ ಆರ್‌ಸಿಬಿ ಮಾಜಿ ಆಟಗಾರ!

ಆರ್‌ಸಿಬಿ ತಂಡದಲ್ಲಿ ಮಿಂಚು ಹರಿಸಿದ್ದ ಅಂತರರಾಷ್ಟ್ರೀಯ ಕ್ರಿಕೆಟಿಗ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್ ಕಳ್ಳತನದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ! ಕ್ರಿಕೆಟ್ ನಲ್ಲಿ ಹೆಸರು ಮಾಡಿದ್ದರೂ 35ರ ಹರೆಯದ ಅವರು ಅನೇಕ ಕಳ್ಳತನ ಪ್ರಕರಣಕ್ಕೆ ಗುರಿಯಾಗಿದ್ದಾರೆ.

ಸಿಡ್ನಿ ಪೊಲೀಸರು ಲ್ಯೂಕ್ ಪೊಮರ್ಸ್‌ಬಾಚ್ ಬಂಧಿಸಿದ್ದಾರೆ. ಈ ಹಿಂದೆ ಲ್ಯೂಕ್ ಪೊಮರ್ಸ್‌ಬಾಚ್ ಬೈಕ್ ಕಳ್ಳತನ, ಮದ್ಯದಂಗಡಿಯಲ್ಲಿ ಲಿಕ್ಕರ್ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದರು. ಈಗ ಮತ್ತೊಮ್ಮೆ ಕಳ್ಳತನ ಮಾಡಿ ಜೈಲು ಸೇರಿದ್ದಾರೆ.

ಇನ್ನಲೂ ಎಂಬ ನಗರದಲ್ಲಿ ಹೊಸವರ್ಷದ ದಿನದಂದು ಮದ್ಯದಂಗಡಿಯಲ್ಲಿ 10 ​ ಮದ್ಯದ ಪ್ಯಾಕ್ ಕಳ್ಳತನ ಮಾಡಿದ್ದ ಲ್ಯೂಕ್​ ಬಳಿಕ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದಿದ್ದರು. ಈ ಸಂಬಂಧ ಪರ್ತ್​ನಲ್ಲಿರುವ ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದ್ರೆ, ಲ್ಯೂಕ್ ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್​ ಅರೆಸ್ಟ್​ ವಾರಂಟ್​ ಹೊರಡಿಸಿದೆ.

​2014ರಲ್ಲಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದ ಲ್ಯೂಕ್ ಪೊಮರ್ಸ್‌ಬಾಚ್ ಕೆಟ್ಟ ಚಟಗಳ ದಾಸನಾಗಿದ್ದ ಲ್ಯೂಕ್​ ಮನೆಯನ್ನೂ ಕಳೆದುಕೊಂಡು ತಮ್ಮ ಕಾರಿನಲ್ಲಿಯೇ ವಾಸಮಾಡುತ್ತಿದ್ದರು ಎಂದು ವರದಿಯಾಗಿದೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top