fbpx
ಸಮಾಚಾರ

ಪಾಕ್ ಪೌರತ್ವ ಪಡೆಯಲು ಮುಂದಾದ RCB ಮಾಜಿ ಆಲ್‍ರೌಂಡರ್!

ಪಾಕಿಸ್ತಾನಕ್ಕೆ ಹೋಗಲು ಬಹುತೇಕ ಕ್ರಿಕೆಟಿಗರು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಡರೆನ್‌ ಸಾಮಿ, ಒಂದು ಹೆಜ್ಜೆ ಮುಂದೆಹೋಗಿ ಪಾಕಿಸ್ತಾನದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ಯಾರೆನ್ ಸ್ಯಾಮಿ ಪಾಕಿಸ್ತಾನದ ಪ್ರಜೆಯಾಗಲು ಸಜ್ಜಾಗಿದ್ದು, ಅವರಿಗೆ ಗೌರವ ಪೌರತ್ವ ನೀಡುವ ಅರ್ಜಿಯನ್ನು ಪಾಕ್ ಅಧ್ಯಕ್ಷರಿಗೆ ರವಾನಿಸಲಾಗಿದೆ.

IPLನಲ್ಲಿ ಕಳಪೆ ಪದರ್ಶನ ನೀಡಿ ಹೊರಬಿದ್ದ ಡ್ಯಾರೆಲ್ ಸ್ಯಾಮಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಸೇರಿ ಮಿಂಚಿದ್ದಾರೆ. ಉದ್ಯಮಿ ಜಾವೆದ್ ಅಫ್ರಿದಿ ಮಾಲೀಕತ್ವದ ಪೇಶ್ವರ್ ಜಲ್ಮಿ ತಂಡದಲ್ಲಿ ಡ್ಯಾರೆನ್ ನಾಯಕರಾಗಿದ್ದಾರೆ. ಇದಕ್ಕೆ ಪೂರಕವಾಗಿ ಡ್ರೆರೆನ್‌ ಸಾಮಿಗೆ ಪಾಕಿಸ್ತಾನ ಪ್ರಜೆಯಾಗುವ ಹಕ್ಕು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಜಾವೆದ್‌ ಅಫ್ರಿದಿ ಖಾತ್ರಿ ಪಡಿಸಿದ್ದಾರೆ.

“ಡರೆನ್‌ ಸಾಮಿ ಸಲುವಾಗಿ ಗೌರವ ಪೌರತ್ವಕ್ಕೆ ಮನವಿ ಮಾಡಿದ್ದೇವೆ. ಸಾಮಿ ಅವರ ಅರ್ಜಿ ಸದ್ಯ ರಾಷ್ಟ್ರಪತಿಗಳ ಟೇಬಲ್‌ ಮೇಲಿದೆ. ಸಾಮಿ ಪರವಾಗಿ ಒಳ್ಳೆಯ ಮಾತುಗಳನ್ನು ಆಡುವಂತೆ ಪಿಸಿಬಿ ಮುಖ್ಯಸ್ಥರ ಬಳಿ ಮಾತನಾಡಿದ್ದೇನೆ.ಆದ್ದರಿಂದ ಗೌರವ ಪೌರತ್ವವನ್ನು ಅಧ್ಯಕ್ಷರು ಅನುಮೋದಿಸುತ್ತಾರೆ ಎಂಬ ಭರವಸೆ ಇದೆ. ,” ಎಂದು ಜಾವೆದ್‌ ಅಫ್ರಿದಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top