fbpx
ಸಮಾಚಾರ

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಶಿವಣ್ಣ!

ಅಣ್ಣಾವ್ರ ಕುಟುಂಬ ದೇವರನ್ನು ಹೆಚ್ಚು ನಂಬುತ್ತಾರೆ, ಆರಾಧಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಪ್ರತಿ ವರ್ಷ ಶಿವರಾಜ್‍ಕುಮಾರ್ ಅವರು ಅಯ್ಯಪ್ಪ ಮಾಲೆ ಧರಿಸಿ, ಶಬರಿಮಲೆಗೆ ಹೋಗುತ್ತಾರೆ. ಅದರಂತೆ ಈ ವರ್ಷವೂ ಕೂಡ ಶಿವಣ್ಣ ತಮ್ಮ ಸಂಗಡಿಗರ ಜೊತೆ ಮಾಲೆ ಹಾಕಿಸಿಕೊಂಡು ಅಯ್ಯಪ್ಪನ ದರ್ಶನಕ್ಕೆ ಹೋರಾಡಲು ಸಜ್ಜಾಗಿದ್ದಾರೆ!

ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯ ಅಯ್ಯಪ್ಪ ಸ್ವಾಮಿ ದೇವಾಲಯಲ್ಲಿ ಇಂದು ಪೂಜೆ ಸಲ್ಲಿಸಿ, ಮಾಲೆ ಧರಿಸಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಜೊತೆಗಿದ್ದರು. ಇಂದು ಮಾಲೆ ಧರಿಸಿದ್ದು, ಮಾರ್ಚ್ 14 ರಂದು ಬೆಂಗಳೂರಿನಿಂದ ಶಬರಿಮಲೆಗೆ ಹೊರಡಲಿದ್ದಾರೆ.

 

 

ಶಿವಣ್ಣ ಜೊತೆಗೆ ನಟ ಹಾಗೂ ನಿರ್ದೇಶಕ ರಘುರಾಮ್​ ಸೇರಿದಂತೆ ಹಲವರು ಕೂಡ ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ”ದೂರದ ಶಬರಿಮಲೆಗೆ ಹೊರಡಲು ಮಾಲೆ ಅನ್ನೋ ಪವಿತ್ರತೆಯನ್ನು ಧರಿಸಲು, 18 ಶ್ರೇಷ್ಠ ಮೆಟ್ಟಲುಗಳನ್ನು ಹತ್ತಲು, ಅಯ್ಯಪ್ಪನ ದರ್ಶನಕ್ಕೆ ಕರುನಾಡ ದೊರೆಯೊಂದಿಗೆ ಇದೆ (14/03/20) ಹೊರಟಿರುವೆವು ಸ್ವಾಮಿಯೇ ನಿನ್ನೆ ನೋಡಲು” ಎಂದು ನಿರ್ದೇಶಕ ರಘುರಾಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top