fbpx
ಸಮಾಚಾರ

ಸರಳವಾಗಿದ್ದರೂ ತುಂಬಾ ವಿಶೇಷವಾಗಿದೆ ನಿಖಿಲ್-ರೇವತಿ ಮದುವೆ ಆಮಂತ್ರಣ ಪತ್ರಿಕೆ: ಫೋಟೋ ವೈರಲ್

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ಜೆಡಿಎಸ್ ರಾಜ್ಯ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೇವತಿ ಅವರ ಮದುವೆ ಏಪ್ರಿಲ್ ತಿಂಗಳಲ್ಲಿ ನೆರವೇರಲಿದೆ ಎಂದು ಹೇಳಲಾಗುತ್ತಿತ್ತು ಇದೀಗ ಈ ಸುದ್ದಿ ಅಧಿಕೃತವಾಗಿದ್ದು ನಿಖಿಲ್ ಕಲ್ಯಾಣದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!

 

 

ನಿಖಿಲ್‌ ಅವರ ಮದುವೆಯು ರೇವತಿ ಅವರೊಂದಿಗೆ ರಾಮನಗರದ ಜಾನಪದ ಲೋಕದ ಹತ್ತಿರ ಇರುವ ಸಪ್ತಪದಿ ಮಂಟಪದಲ್ಲಿ ಏ. 17ರಂದು ಬೆಳಿಗ್ಗೆ 9.15 ರಿಂದ 9.40ರ ಒಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ವಿವಾಹ ನಡೆಯಲಿದೆ. ಸದ್ಯ ಮದುವೆಗಾಗಿ ಮಾಡಿಸಿರುವ ಆಹ್ವಾನ ಪತ್ರಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ವಿವಾಹ ಆಹ್ವಾನ ಪತ್ರಿಕೆಯಲ್ಲಿ ಕುಮಾರಸ್ವಾಮಿ ಅವರು ಬರೆದಿರುವ ಪತ್ರ ಕೂಡ ಇದೆ. ಆ ಕುರಿತು ಎಕ್ಸ್‌ಕ್ಲೂಸಿವ್‌ ಮಾಹಿತಿ ಇಲ್ಲಿದೆ.

 

 

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಹಾಗೂ ಲಗ್ನಪತ್ರಿಕೆ ಎಂದ ಕೂಡಲೇ ಅದರಲ್ಲಿ ಏನೋ ವಿಶೇಷತೆ ಇದ್ದೇ ಇರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇರುತ್ತದೆ. ಆದರೆ ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದಂತೆ ಅವರು ಮಗನ ಮದುವೆಯನ್ನು ಬಹಳ ಸಿಂಪಲ್​ ಆಗಿ ಮಾಡಲಿದ್ದಾರೆ ಅನ್ನೋದನ್ನು ಲಗ್ನ ಪತ್ರಿಕೆ ವಿಷಯದಲ್ಲೂ ನಿಜ ಮಾಡಿದ್ದಾರೆ.

 

 

ನಿಖಿಲ್ ಕುಮಾರ್ ಮತ್ತು ರೇವತಿ ಮದುವೆಯ ಆಮಂತ್ರಣ ಪತ್ರಿಕೆ ನೋಡಲು ಸರಳವಾಗಿದ್ದು ಮಾಮೂಲಿಯಂತೆ ತಾರೀಖು ಮತ್ತು ವಾರದ ವಿವರ ವರ-ವಧು ಅವರ ಹೆಸರುಗಳು ಹಾಗೆಯೆ ಅವರ ಕುಟುಂಬದ ಹೆಸರುಗಳು ಇವೆ! ಈ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಮಗನ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ನಾಡಿನ ಜನತೆಗೆ ಮನವಿ ಮಾಡಿ ವಿಶೇಷ ಪತ್ರವನ್ನು ಬರೆದಿದ್ದಾರೆ. “ನನ್ನ ಮಗ-ಸೊಸೆ ಮೇಲೆ ನಿಮ್ಮ ಹಾರೈಕೆ ಆಶೀರ್ವಾದವಿರಲಿ, ಜೊತೆಯಲ್ಲೇ ಊಟ ಮಾಡೋಣ, ಇದಕ್ಕಿಂತ ದೊಡ್ಡ ಸೌಭಾಗ್ಯ ನನಗೆ ಇನ್ನೊಂದಿಲ್ಲ” ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top