fbpx
ಸಮಾಚಾರ

ಭಾರತದಲ್ಲಿ ಹೀಗೊಬ್ಬ ಟ್ರಂಪ್ ಭಕ್ತ: ಡೊನಾಲ್ಡ್ ಟ್ರಂಪ್‌ಗಾಗಿ ದೇವಸ್ಥಾನವನ್ನೇ ನಿರ್ಮಿಸಿದ ವ್ಯಕ್ತಿ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅಮೆರಿಕ ಅಷ್ಟೇ ಅಲ್ಲದೆ ಭಾರತದಲ್ಲೂ ಟ್ರಂಪ್ ತಮ್ಮ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ತೆಲಂಗಾಣದಲ್ಲಿ ಅಭಿಮಾನಿಯೊಬ್ಬರು ಟ್ರಂಪ್‍ಗಾಗಿಯೇ ದೇವಸ್ಥಾನವನ್ನೇ ನಿರ್ಮಿಸಿದ್ದಾರೆ. ಸದ್ಯ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೇವಸ್ಥಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

ತೆಲಂಗಾಣದ ಜನ್‍ಗಾನ್ ಜಿಲ್ಲೆಯ ಬುಸ್ಸಾ ಕೃಷ್ಣ ಎಂಬವರು ಟ್ರಂಪ್‍ನ ಅಪ್ಪಟ ಅಭಿಮಾನಿ. ಟ್ರಂಪ್‍ಗಾಗಿ ದೇಗುಲ ಕಟ್ಟಿಸಿರುವ ಕೃಷ್ಣ, 6 ಅಡಿ ಎತ್ತರದ ಟ್ರಂಪ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜಿಸುತ್ತಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ನಿತ್ಯವೂ ಹಾಲಿನ ಅಭಿಷೇಕ ಸೇರಿ ವಿವಿಧ ಅಭಿಷೇಕಗಳನ್ನು ಮಾಡುತ್ತಿದ್ದಾರೆ.

 

 

ಭಾರತ-ಅಮೆರಿಕ ಸಂಬಂಧಗಳು ಸದೃಢವಾಗಿ ಇರಬೇಕೆಂದು ನಾನು ಬಯಸುತ್ತೇನೆ. ಪ್ರತಿ ಶುಕ್ರವಾರ ನಾನು ಟ್ರಂಪ್ ಅವರ ದೀರ್ಘಾಯಸ್ಸಿಗಾಗಿ ಉಪವಾಸ ಮಾಡುತ್ತೇನೆ. ನಾನು ಅವರ ಫೋಟೋವನ್ನು ಯಾವಾಗಲೂ ನನ್ನ ಬಳಿಯೇ ಇಟ್ಟುಕೊಂಡಿರುತ್ತೇನೆ. ಅಲ್ಲದೆ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಪ್ರಾರ್ಥಿಸುತ್ತೇನೆ. ನಾನು ಅವರನ್ನು ಭೇಟಿಯಾಗಲು ಬಯಸಿದ್ದು, ನನ್ನ ಕನಸನ್ನು ನನಸಾಗಿಸಲು ನಾನು ಸರಕಾರವನ್ನು ವಿನಂತಿಸುತ್ತೇನೆ ಎಂದು ಖಾಸಗಿ ಸುದ್ದಿವಾಹಿನಿಯೊಂದಿಗೆ ಹೇಳಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top