fbpx
ಸಮಾಚಾರ

ನಿವೇದಿತಾಗೆ ಮಾಂಗಲ್ಯ ಧಾರಣೆ ಮಾಡಿದ ಚಂದನ್ ಶೆಟ್ಟಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಜೋಡಿ!

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಂದು ಬೆಳಿಗ್ಗೆ ನವ ದಾಂಪತ್ಯ ಜೀವನಕ್ಕೆ ಕಾಲಿಸಿರಿಸಿದ್ದಾರೆ. ಮೈಸೂರಿನ ಹಿನಕಲ್‌ ಸ್ಪೆಕ್ಟ್ರಾ ಕಲ್ಯಾಣ ಮಂಟಪದಲ್ಲಿ ಚಂದನ್​ ನಿವೇದಿತಾರ ವಿವಾಹ ಅದ್ಧೂರಿಯಾಗಿ ನೆರವೇರಿತು. ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಹೂವಿನ ಮಂಟಪದಲ್ಲಿ ಚಂದನ್​ ನಿವೇದಿತಾರಿಗೆ ಮಾಂಗಲ್ಯ ಧಾರಣೆ ಮಾಡಿದರು.

‘ಮೀನಾ’ ಲಗ್ನದಲ್ಲಿ ಆಪ್ತರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಚಂದನ್‌ಶೆಟ್ಟಿ ನಿವೇದಿತಾಗೆ ಮಾಂಗಲ್ಯಧಾರಣೆ ಮಾಡಿದ್ರು. ಬೆಳಗ್ಗೆ 9 ಗಂಟೆಗೆವರೆಗೆ ಧಾರಾಮುಹೂರ್ತ ನಡೆಯಲಿದೆ. ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ಮದುವೆ ಶಾಸ್ತ್ರಗಳು ನಡೆಯಲಿವೆ.

ಈ ಕಾರ್ಯಕ್ರಮದಲ್ಲಿ ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್, ಚಂದನ್‍ಶೆಟ್ಟಿ ಪೋಷಕರಾದ ಪ್ರೇಮಲತಾ ಹಾಗೂ ಪರಮೇಶ್, ಆಪ್ತರು, ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ನಿವೇದಿತಾಗೆ ಚಂದನ್ ತಾಳಿ ಕಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top