fbpx
ಸಮಾಚಾರ

ಫೇಸ್‌ಬುಕ್‌ ಹಿಂದುತ್ವವಾದಿ ಅತುಲ್ ಕುಮಾರ್ ಸಬರ್ವಾಲ್ ಅಲಿಯಾಸ್ ಮಧುಗಿರಿ ಮೊದಿ ಬಂಧನ

ಪ್ರವಾದಿ ಮುಹಮ್ಮದ್(ಸ.) ಅವರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್‌ಗಳನ್ನು ಹಾಕಿದ ಆರೋಪಿಯನ್ನು ತುಮಕೂರು ಪೊಲೀಸರು ಅನಂತಪುರದ ಆಝಾದ್ ನಗರದಲ್ಲಿ ಬಂಧಿಸಿದ್ದಾರೆ.

ಅತುಲ್ ಕುಮಾರ್ ಸಬರ್ವಾಲ್ ಅಲಿಯಾಸ್ ಮಧುಗಿರಿ ಮೋದಿ ಎಂಬುವವನು ದಿನಾಂಕ 10/02/2020 ರಂದು ತನ್ನ ಫೇಸ್ಬುಕ್ ಅಕೌಂಟ್ ಮೂಲಕ ಒಂದು ಕೋಮಿನ ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಧರ್ಮ ಗುರುಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ,ಒಂದು ಕೋಮಿನ ಬಗ್ಗೆ ಮತ್ತು ಪ್ರವಾದಿಗಳಿಗೆ ಅವಮಾನ ಮಾಡಿ ಮಾತನಾಡಿರುವ ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಹಾಗಾಗಿ ಈತನ ವಿರುದ್ಧ ದೂರು ದಾಖಲಾಗಿತ್ತು.

ತನ್ನ ವಿರುದ್ಧ ದೂರು ದಾಖಲಾಗಿದ್ದ ಬಗ್ಗೆ ಹಾಗೂ ತನ್ನ ಮನೆಗೆ ಪೊಲೀಸರು ಭೇಟಿ ನೀಡಿದ್ದ ಬಗ್ಗೆ ಅಜ್ಞಾತ ಸ್ಥಳದಿಂದ ಮಧುಗಿರಿ ಮೋದಿ ಪೋಸ್ಟ್ ಒಂದನ್ನು ಹಾಕಿ, ಪೊಲೀಸರನ್ನು ಸಹ ಅಣಕಿಸಿದ್ದ. ನಂತರ ಪೊಲೀಸರು ಈತನ ಹುಡುಕಾಟ ತೀವ್ರಗೊಳಿಸಿದ್ದರು.

ವಿಡಿಯೋ‌ ವೈರಲ್ ಮಾಡಿ ಕಣ್ಮರೆಯಾಗಿದ್ದ ಮಧುಗಿರಿ ಮೋದಿಯನ್ನು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಅಜಾದ್ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ ಅತುಲ್ ಕುಮಾರ್ ಸಬರ್ ವಾಲ್ ಅಲಿಯಾಸ್ ಮಧುಗಿರಿ ಮೋದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅತುಲ್‌ಕುಮಾರ್ ಅಲಿಯಾಸ್ ಮಧುಗಿರಿ ಮೋದಿಯನ್ನು ಬಂಧಿಸಲು ಯಶಸ್ವಿದ ಪೊಲೀಸ್ ತಂಡಕ್ಕೆ ಎಸ್ಪಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top