fbpx
ಸಮಾಚಾರ

ಶೂ ಪಾಲಿಶ್ ಮಾಡುತ್ತಿದ್ದ ಯುವಕ ಈಗ ‘ಇಂಡಿಯನ್ ಐಡಲ್’!

ಶೂ ಪಾಲಿಶ್ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪಂಜಾಬ್‍ನ ಭಟಿಂಡಾದ ಯುವಕ ಸನ್ನಿ ಹಿಂದೂಸ್ತಾನಿ ಈಗ ‘ಇಂಡಿಯನ್ ಐಡಲ್’ ಆಗಿ ಹೊರಹೊಮ್ಮಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯನ್ ಐಡಲ್ 11ನೇ ಆವೃತ್ತಿ’ ಸ್ಪರ್ಧೆಯಲ್ಲಿ ಸನ್ನಿ ಗೆದ್ದು ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಸನ್ನಿ ಇಂಡಿಯನ್ ಐಡಲ್ ಟ್ರೋಫಿ ಜೊತೆಗೆ 25 ಲಕ್ಷ ರೂ ನಗದು ಮತ್ತು ಕಾರ್ ಹಾಗೂ ಟಿ ಸಿರೀಸ್ ಸಂಸ್ಥೆಯಲ್ಲಿ ಹಾಡುವ ಕಾಂಟ್ರಾಕ್ಟ್ ಕೂಡ ಅವರಿಗೆ ದೊರೆತಿದೆ. ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ ಸನ್ನಿ ಹಾಡಿನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಶೂ ಪಾಲಿಶ್ ಮಾಡಿಕೊಂಡಿದ್ದ ಸನ್ನಿ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿದ್ದ ಕುಟುಂಬದವರಲ್ಲ. ಮಾದ್ಯಮ ವರದಿಗಳ ಪ್ರಕಾರ ಅವರು ಇಂಡಿಯನ್ ಐಡಲ್ 11 ರ ಆಡಿಷನ್ ನೀಡುವ ಸಲುವಾಗಿ ಬೇರೊಬ್ಬರಿಂದ ಹಣವನ್ನು ಎರವಲು ಪಡೆದು ಬಂದಿದ್ದರು.

ಇಂಡಿಯನ್ ಐಡಲ್ 11 ರ ಆಡಿಷನ್ ನೀಡಲು ಬಂದಾಗ, ಈ ಪ್ರದರ್ಶನವು ಇಷ್ಟು ದೊಡ್ಡ ಮಟ್ಟದಲ್ಲಿರಲಿದೆ ಎಂಬ ಎಣಿಕೆ ಸನ್ನಿ ಅವರಿಗೆ ಇರಲಿಲ್ಲ. ಮೇಲಾಗಿ ಅವರು ಜೀವನದಲ್ಲಿ ಎಲ್ಲಾ ಭರವಸೆಗಳನ್ನು ಕಳೆದುಕೊಂಡ ನಂತರ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.”ನಾನಿಲ್ಲಿಗೆ ಬರುವುದಾಗಿ ಎಂದಿಗೂ ಯೋಚಿಸಿರಲಿಲ್ಲ ಎರಡೂ ಆಡಿಷನ್ ಸುತ್ತುಗಳಲ್ಲಿ ಗೋಲ್ಡನ್ ಮೈಕ್ಸ್ಸ್ವೀಕರಿಸಿದ್ದು ನನಗೆ ನಿಜಕ್ಕೂ ಅಚ್ಚರಿ ತಂದಿತ್ತು.” ಅವರು ಹೇಳಿದ್ದಾರೆ.

ಅಂದಹಾಗೆ ಸನ್ನಿ ಹಿಂದೂಸ್ತಾನಿಯೇನು ವೃತ್ತಿಪರ ಸಂಗೀತಗಾರ ಆಗಿರಲಿಲ್ಲ. ಸಂಗೀತದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಇತ್ತು. ಆದ್ರೆ ಮನೆಯಲ್ಲಿ ಬಡತನ. ಕುಟುಂಬ ನಿರ್ವಹಣೆಗೆ ಬೂಟ್​ ಪಾಲಿಶ್​ ಮಾಡುತ್ತಿದ್ದರು. ಹೀಗಾಗಿ ಸಂಗೀತದ ಬಗ್ಗೆ ಅವರಿಗೆ ಸೂಕ್ತ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಆದ್ರೆ ಸಂಗೀತದ ಮೇಲೆ ಅವರಿಗಿದ್ದ ಅಪಾರ ಶ್ರದ್ಧೆ, ಆಸಕ್ತಿ ಅವರನ್ನ ಗಾಯನದ ಸಮೀಪಕ್ಕೆ ಸೆಳೆದಿತ್ತು. ತನ್ನ ಮೊಬೈಲ್​ನಲ್ಲಿ ಸುಸ್ರತ್ ಫತೆ ಅಲಿ ಖಾನ್​ರ ಹಾಡುಗಳನ್ನ ಕೇಳಿ ಕೇಳಿಯೇ ಸನ್ನಿ ಕಲಿತುಕೊಂಡಿದ್ದರು.

ಸನ್ನಿ ತಂದೆ ಬೂಟ್ ಪಾಲಿಶ್ ಮಾಡಿ ಸಂಸಾರ ನಡೆಸುತ್ತಿದ್ದರು. ಅವರು ಕೂಡ ಉತ್ತಮ ಹಾಡುಗಾರರಾಗಿದ್ದರು. ಸಂಗೀತ ಕಲಿಯದಿದ್ದರೂ ಆಗಾಗ ಮದುವೆ ಮನೆಗಳಲ್ಲಿ ಹಾಡಿ ಸ್ವಲ್ಪ ಹಣ ಗಳಿಸುತ್ತಿದ್ದರು. ಇತ್ತ ಸನ್ನಿ ತಾಯಿ ಬೀದಿ ಬೀದಿಯನ್ನು ಸುತ್ತಿ ಆಕಾಶ ಬುಟ್ಟಿಗಳನ್ನು ಮಾರಾಟ ಮಾಡಿಕೊಂಡು ದುಡಿಯುತ್ತಿದ್ದರು. ಆದರೆ ಕಾಶ್ಮೀರ ಪ್ರವಾಹದ ಸಂದರ್ಭದಲ್ಲಿ ಸನ್ನಿ ತಮ್ಮ ತಂದೆಯನ್ನು ಕಳೆದುಕೊಂಡರು. ತಂದೆ ಮೃತಪಟ್ಟ ಬಳಿಕ ಸನ್ನಿ ಕೂಡ ಬೂಟ್ ಪಾಲಿಶ್ ಮಾಡುತ್ತಾ ಕುಟುಂಬಕ್ಕೆ ಆಸರೆಯಾದರು. ಆದರೆ ಕಡುಬಡತನದಲ್ಲಿ ಸಂಗೀತದ ಮೇಲಿದ್ದ ಅವರ ಪ್ರೀತಿ, ಒಲವು ಕಿಂಚಿತ್ತು ಕಡಿಮೆ ಆಗಿರಲಿಲ್ಲ. ಪ್ರತಿಭೆ, ಛಲವಿದ್ದರೆ ಎಷ್ಟೇ ಕಷ್ಟವಾದರೂ ಸಾಧನೆ ಮಾಡಬಹುದು ಎನ್ನುವುದನ್ನ ಸನ್ನಿ ಸಾಭೀತು ಮಾಡಿದ್ದಾರೆ. ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top