fbpx
ಸಮಾಚಾರ

ಕೊನೇ ಕ್ಷಣದಲ್ಲಿ ಕೆಜಿಎಫ್-2 ಚಿತ್ರದಿಂದ ಹೊರ ನಡೆದ ಖ್ಯಾತ ನಟ? ಸ್ಕ್ರಿಪ್ಟ್ ಬದಲಾವಣೆ?

ಪ್ರೇಕ್ಷಕರ ನಿರೀಕ್ಷೆಯಂತೆ ಇದೇ ವರ್ಷಾಂತ್ಯದಲ್ಲಿ ಚಾಪ್ಟರ್-2 ತೆರೆಗೆ ತರಲು ಪ್ರಶಾಂತ್ ನೀಲ್ ಸಿದ್ಧತೆ ನಡೆಸುತ್ತಿದ್ದಾರೆ. ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಈ ಮಧ್ಯೆ ಖ್ಯಾತ ನಟನೋರ್ವ ಚಿತ್ರದಿಂದ ಹೊರ ನಡೆದಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಸ್ಕ್ರಿಪ್ಟ್ಅನ್ನೇ ಬದಲಿಸಿದ್ದಾರಂತೆ.

ಮೂಲಗಳು ನೀಡುವ ಮಾಹಿತಿ ಪ್ರಕಾರ, ಅವರ ಪಾತ್ರವು ‘ಕೆಜಿಎಫ್‌ 2’ನಲ್ಲೂ ಇತ್ತು. ಇಲ್ಲಿಯೂ ಅವರು ರಾಕಿ ಭಾಯ್ ವೃತ್ತಾಂತ ಹೇಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರು ಈ ಸಿನಿಮಾದಿಂದ ದೂರ ಉಳಿದಿದ್ದಾರೆ. ಸದ್ಯ ಇಂಥದ್ದೊಂದು ಬೆಳವಣಿಗೆ ಆಗಿರುವುದು ನಿಜ ಎನ್ನಲಾಗುತ್ತಿದೆಯಾದರೂ, ಅಧಿಕೃತವಾಗಿ ಯಾರು ಮಾಹಿತಿ ನೀಡಿಲ್ಲ.

ಪ್ರಶಾಂತ್ ನೀಲ್‌ ನಿರ್ದೇಶನದ ‘ಕೆಜಿಎಫ್‌ ಚಾಪ್ಟರ್‌ 1’ರಲ್ಲಿ ಆನಂದ್ ಇಂಗಳಗಿ ಎಂಬ ಪತ್ರಕರ್ತನ ಪಾತ್ರದಲ್ಲಿ ಅನಂತ್ ನಾಗ್ ಕಾಣಿಸಿಕೊಂಡಿದ್ದರು.. ರಾಕಿ ಭಾಯ್‌ನ ಇಡೀ ವೃತ್ತಾಂತವನ್ನು ಹೇಳುವುದೇ ಇದೇ ಇಂಗಳಗಿ. ‘ಕೆಜಿಎಫ್‌ ಚಾಪ್ಟರ್ 1’ರಲ್ಲಿ ಅನಂತ್ ನಾಗ್-ಮಾಳವಿಕಾ ಅವಿನಾಶ್‌ ಕಾಂಬಿನೇಷನ್‌ನ ದೃಶ್ಯಗಳು ಪ್ರೇಕ್ಷಕರಿಗೆ ಹಿಡಿಸಿದ್ದವು. ಈಗ ಅನಂತ್ ನಾಗ್ ಅವರೇ ಚಿತ್ರದಲ್ಲಿ ಇಲ್ಲ ಎಂದಾದರೆ! ಅನಂತ್ ನಾಗ್ ಸಿನಿಮಾದಲ್ಲಿ ನಟಿಸದೇ ಇರುವುದರಿಂದ ಅವರ ಭಾಗದ ಕಥೆಯನ್ನು ಕೊಂಚ ಬದಲಾವಣೆ ಮಾಡಲಾಗಿದೆ ಎಂಬ ವದಂತಿ ಕೇಳಿಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top